ಮಡಿಕೇರಿ, ಆ. ೨೫ : ಕೊಡಗು ಜಿಲ್ಲಾ ಪೊಲೀಸ್ ಸೋಮವಾರಪೇಟೆ ವಿಭಾಗ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಗಣೇಶೋತ್ಸವ ಆಚರಣೆ ಸಮಿತಿ ಆಯೋಜಕರ ಸಭೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋಮವಾರಪೇಟೆ ವಿಭಾಗದ ಡೆಪ್ಯೂಟಿ ಸೂಪರಿಂಟೆAಡೆAಟ್ ಆಪ್ ಪೊಲೀಸ್, ಗಂಗಾಧರ್ ಅವರು ಮಾತನಾಡಿ ಭಾರತ ದೇಶವು ವಿಶ್ವದಲ್ಲಿ ಹೆಚ್ಚು ಹಬ್ಬಗಳನ್ನು ಆಚರಿಸುವ ದೇಶವಾಗಿದೆ. ಗಣಪತಿ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿAದ ಆಚರಿಸುತ್ತಾರೆ. ಹಬ್ಬವನ್ನು ಸಂಭ್ರಮದಿAದ ಶಾಂತಿಯುತವಾಗಿ ಸಾರ್ವಜನಿಕರಿಗೆ ತೊಂದರೆಯಾಗದAತೆ ಆಚರಿಸಿ ಕಾನೂನಿನ ನೀತಿ ನಿಯಮಗಳನ್ನು ಪಾಲಿಸಿ ಇಲ್ಲದಿದ್ದರೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತದೆ. ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡುತ್ತೇವೆ. ಆಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ ರಾತ್ರಿ ೬ ಗಂಟೆಯಿAದ ೧೦ ಗಂಟೆವರೆಗೆ ಮೆರವಣಿಗೆ ಡಿಜೆಗಳನ್ನು ಮುಗಿಸಬೇಕೆಂದು ಹೇಳುತ್ತಾ ಪರಿಸರಕ್ಕೆ ಹಾನಿಯಾಗದಂತೆ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಯಾವುದೇ ವಿಘ್ನಗಳು ಉಂಟಾಗದAತೆ ಎಚ್ಚರ ವಹಿಸಿ ಎಲ್ಲರೂ ಕಡ್ಡಾಯವಾಗಿ ಅನುಮತಿಯನ್ನು ಪಡೆಯಬೇಕೆಂದರು. ಜೀವವು ಅಮೂಲ್ಯ ವಾಗಿದ್ದು ಜೀವ ಹಾನಿಯಾಗದಂತೆ ನೋಡಿಕೊಳ್ಳಿ ಗಣಪತಿ ಹಬ್ಬವನ್ನು ಸಂಭ್ರಮದಿAದ ಸಂತೋಷವಾಗಿ ಆಚರಣೆ ಮಾಡಿ ಎಂದು ಇಲ್ಲಿ ಸುಮಾರು ಗ್ರಾಮಾಂತರ ಪೊಲೀಸ್ ಠಾಣೆ ೯೦ ಸಮಿತಿಗಳು ಭಾಗವಹಿಸಿರೋದು ಖುಷಿಯ ವಿಷಯವಾಗಿದೆ ಎಂದರು. ಈ ಸಭೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಅಪರಾಧ ಉಪನಿರೀಕ್ಷಕ ಸ್ವಾಮಿ, ಭಾಗವಹಿಸಿದ್ದು. ಕಾರ್ಯಕ್ರಮ ನಿರೂಪಣೆ ಸ್ವಾಗತ ವಂದನೆಗಳನ್ನು ಠಾಣೆ ಉಪನಿರೀಕ್ಷಕರಾದ ಮೋಹನ್ ರಾಜ್ ಅವರು ನೆರವೇರಿಸಿದರು.