ಕುಶಾಲನಗರ, ಆ. ೨೫: ವಿವಿಧ ಕಾಫಿ ತಳಿಗಳನ್ನು ಸಂರಕ್ಷಿಸಿರುವ ಕೊಡಗು ಜಿಲ್ಲೆಯ ಉಲುಗುಲಿಯ ಪ್ರಗತಿಪರ ಕಾಫಿ ಬೆಳೆಗಾರರಾಗಿರುವ ನಡಿಕೇರಿಯಂಡ ಬೋಸ್ ಮಂದಣ್ಣ ಅವರು ಕೊಡಗು ವಿಶ್ವವಿದ್ಯಾಲಯಕ್ಕೆ ಉತ್ತಮ ಗುಣಮಟ್ಟದ ಹೈ ಕ್ವಾಲಿಟಿ ಪ್ರಿಂಟರ್ ಮತ್ತು ಜೆರಾಕ್ಸ್ ಮಿಷಿನ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.

ಉತ್ತಮ ಗುಣಮಟ್ಟದ ಹೈಕ್ವಾಲಿಟಿ ಪ್ರಿಂಟರ್ ಮತ್ತು ಜೆರಾಕ್ಸ್ ಮಿಷಿನ್ ಅನ್ನು ಕೊಡುಗೆಯಾಗಿ ನೀಡಿರುವುದು ಹೆಮ್ಮೆಯ ವಿಷಯದ ಜೊತೆಗೆ ಇತರರಿಗೂ ಸಹ ಮಾದರಿಯಾಗಿದೆ. ಅವರ ಸಾಮಾಜಿಕ ಸೇವೆಯನ್ನು ಕೊಡಗು ವಿಶ್ವವಿದ್ಯಾಲಯ ಗೌರವಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಹೇಳಿದ್ದು ಇವರನ್ನು ಗೌರವಿಸಲಾಯಿತು.

ಈ ಸಂದರ್ಭ ಹಾಸನ ವಿಶ್ವವಿದ್ಯಾಲಯದ ಕುಲಪತಿ ತಾರಾನಾಥ ಟಿ.ಸಿ. ಅವರು, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್. ಗಂಗಾಧರ್, ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಸೀನಪ್ಪ ಉಪಸ್ಥಿತರಿದ್ದರು.