ಮಡಿಕೇರಿ, ಆ.೨೪ : ನಗರದ ಕೋಟೆ ಶ್ರೀಗಣಪತಿ ದೇವಾಲಯದಲ್ಲಿ ಸೆಪ್ಟೆಂಬರ್ ೭ ರಂದು ಆಚರಿಸುತ್ತಿರುವ ಗಣೇಶೋತ್ಸವ ಹಬ್ಬದ ಪ್ರಯುಕ್ತ ಭಕ್ತಾದಿಗಳು ಒಡೆದ ಈಡುಗಾಯಿಗಳನ್ನು ದೇವಾಲಯದ ವತಿಯಿಂದ ಸಾರ್ವಜನಿಕರ ಸಮ್ಮುಖದಲ್ಲಿ ಆಸಕ್ತ ಬಿಡ್ಡುದಾರರಿಂದ ಬಹಿರಂಗ ಹರಾಜು ನಡೆಸಲಾಗುವುದು.
ಆದ್ದರಿಂದ ತಾ. ೨೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೋಟೆ ಶ್ರೀಗಣಪತಿ ದೇವಾಲಯದಲ್ಲಿ ಸಾರ್ವಜನಿಕ ಆಸಕ್ತ ಬಿಡ್ಡುದಾರರು ಈಡುಗಾಯಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಶ್ರೀ ಓಂಕಾರೇಶ್ವರ ದೇವಾಲಯದ ಸಿಬ್ಬಂದಿಗಳಾದ ಅಣ್ಣಪ್ಪ ಜೆ.ಆರ್. ಮೊ.ಸಂ.೯೯೦೨೨೯೦೩೦೨ ಮತ್ತು ಕುಶಕುಮಾರ್ ಜೆ.ಎನ್. ಮೊ.ಸಂ.೯೮೪೫೮೨೧೫೬೬ ಇವರಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ.