*ಗೋಣಿಕೊಪ್ಪ, ಆ. ೨೪: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗೋಣಿ ಕೊಪ್ಪ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾA ಮೂಲದ ಸುಮೇದ್ ಆಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿ. ೮ ಕೆ.ಜಿ. ಗೋ ಮಾಂಸವನ್ನು ಚೀಲದಲ್ಲಿ ತುಂಬಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡುತ್ತಿದ್ದ ಸುಮೇದ್ ಆಲಿ ಬಗ್ಗೆ ಅನುಮಾನಗೊಂಡ ಹಿಂದೂ ಸಂಘಟನೆಯ ಕಾರ್ಯಕರ್ತ ಚೇತನ್ ಈತನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿಯನ್ನು ಆಧರಿಸಿ ಪೊಲೀಸರು ಸುಮೇದ್ ಆಲಿ ಹಿಡಿದುಕೊಂಡಿದ್ದ ಚೀಲವನ್ನು ಪರಿಶೀಲಿಸಿದಾಗ ಗೋಮಾಂಸ ಪತ್ತೆಯಾಗಿದೆ. ಚೀಲದಲ್ಲಿ ಸುಮಾರು ೮ ಕೆ.ಜಿ ಗೋಮಾಂಸವನ್ನು ಮಾರಾಟ ಮಾಡುವ ಪ್ರಯತ್ನ ನಡೆದಿತ್ತು ಎಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪ್ರದೀಪ್ ಕುಮಾರ್ ಬಿ.ಕೆ. ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರಿಸಿ ದ್ದಾರೆ. ಆರೋಪಿತ ಪಾಲಿಬೆಟ್ಟ ಖಾಸಗಿ ಎಸ್ಟೇಟ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.

ಇಂತವರ ಮೇಲೆ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ಪರಿಷತ್ ಪೊನ್ನಂಪೇಟೆ ಪ್ರಖಂಡ ಅಧ್ಯಕ್ಷ ಪಂದ್ಯAಡ ಹರೀಶ್ ಒತ್ತಾಯಿಸಿದ್ದಾರೆ.

ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ಗೋಣಿಕೊಪ್ಪ ಘಟಕದ ಅಧ್ಯಕ್ಷ ಎನ್. ಆರ್. ಅಮೃತ್ ರಾಜ್, ಭಜರಂಗದಳ ನಗರ ಸಂಚಾಲಕ ರವೀಂದ್ರಪಾಪು, ಕಾರ್ಯಕರ್ತರು ಗಳಾದ ಅಕ್ಷಯ್, ಪುನೀತ್, ಸುರೇಶ್ ಸೇರಿದಂತೆ ಇನ್ನಿತರರು ಇದ್ದರು.