ಕೂಡಿಗೆ, ಆ. ೨೪: ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕಳೆದ ಎರಡೂ ದಿನಗಳಿಂದ ಸಮೀಪದ ಆತ್ತೂರು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ವ್ಯಾಪ್ತಿಯಲ್ಲಿ ಬೆಳೆಸಲಾಗಿದ್ದ ಮೆಕ್ಕೆಜೋಳ ಮತ್ತು ಸಿಹಿಗೆಣಸು ಬೆಳೆಗಳನ್ನು ತಿಂದು ತುಳಿದು ಅಪಾರ ಪ್ರಮಾಣದಲ್ಲಿ ನಷ್ಟಪಡಿಸಿವೆ.
ಚಿಕ್ಕತ್ತೂರು ಗ್ರಾಮದ ರಿಜೂ, ಸಂತೋಷ್ ಎಂಬವರಿಗೆ ಸೇರಿದ ಜಮೀನಿಗೆ ದಾಳಿ ಮಾಡಿ ನಷ್ಟಪಡಿಸಿವೆ. ಅಲ್ಲದೇ ಅತಿಯಾದ ಮಳೆಯಿಂದಾಗಿ ನೆಲಕಚ್ಚಿದ ಮೆಕ್ಕೆಜೋಳ ಮತ್ತು ಸಿಹಿಗೆಣಸು ಬೆಳೆಯನ್ನು ಹಾನಿ ಮಾಡಿರುವ ಸ್ಥಳಕ್ಕೆ ಅತ್ತೂರು ಉಪವಲಯ ಅರಣ್ಯಾಧಿಕಾರಿ ಉಮೇಶ್ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.