ಮಡಿಕೇರಿ, ಆ. ೨೪: ಯಂತ್ರೋಪಕರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರುಗಳನ್ನು ತನಿಖೆಗೆ ಒಳಪಡಿಸಿದ ಸಂದರ್ಭ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಕುಶಾಲನಗರದ ಗೋಪಾಲ್ ಸರ್ಕಲ್ ನಿವಾಸಿ ಮಹಮ್ಮದ್ ಆಸೀಫ್ (೧೯), ಹೆಚ್.ಆರ್.ಪಿ. ಕಾಲೋನಿಯ ವಿ.ಬಿ. ಕೀರ್ತನ್ (೨೬), ಚೌಡೇಶ್ವರಿ ಬಡಾವಣೆಯ ವಿಶೃತ್ (೧೮), ಟೌನ್ ಕಾಲೋನಿಯ ಹೆಚ್. ಜಯಪ್ರಕಾಶ್ ಬಂಧಿತ ಆರೋಪಿಗಳು.
ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದ ಆರ್.ಕೆ. ಲೇಔಟ್ನಲ್ಲಿರುವ ಈಶ್ವರ ಎಂಬವರು ನೂತನ ಮನೆ ಕಾಮಗಾರಿಗಾಗಿ ನಿರ್ಮಿಸಿರುವ ತಾತ್ಕಾಲಿಕ ಶೆಡ್ನಲ್ಲಿಟ್ಟಿದ್ದ ವಿವಿಧ ಮಾದರಿಯ ೧೧ ಯಂತ್ರೋಪಕರಣಗಳ ಕಳವು ಕುರಿತು ತಾ. ೨೦ ರಂದು ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್ಪಿ ಗಂಗಾಧರಪ್ಪ, ಪೊಲೀಸ್ ಇನ್ಸ್ಪೆಕ್ಟರ್ ಬಿ.ಜೆ. ಪ್ರಕಾಶ್, ಪಿಎಸ್ಐ ಹೆಚ್.ಟಿ. ಗೀತಾ ನೇತೃತ್ವದಲ್ಲಿ ಕುಶಾಲನಗರ ಪೊಲೀಸರು, ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡ ತನಿಖೆ ನಡೆಸಿ ತಾ. ೨೩ ರಂದು ನಾಲ್ವರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭ ೨ ವರ್ಷಗಳ ಹಿಂದೆ ಅರಕಲಗೂಡು, ಬೆಟ್ಟದಪುರ, ಪಿರಿಯಾಪಟ್ಟಣ, ಹುಣಸೂರು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರವಾಹನ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ನಾಲ್ವರು ಆರೋಪಿಗಳ ಪೈಕಿ ಮಹಮ್ಮದ್ ಆಸೀಫ್, ವಿಶೃತ್, ಕೀರ್ತನ್ ವಿರುದ್ಧ ಕುಶಾಲನಗರ ಠಾಣೆಯಲ್ಲಿ ಮಾದಕ ವಸ್ತುಗಳ ಸರಬರಾಜು-ಮಾರಾಟ ಪ್ರಕರಣ, ಕೀರ್ತನ್ ಹಾಗೂ ಜಯಪ್ರಕಾಶ್ ವಿರುದ್ಧ ಈ ಹಿಂದೆ ಸೋಮವಾರ ಪೇಟೆ, ಕುಶಾಲನಗರ ಠಾಣೆಯಲ್ಲಿ ಗ್ಯಾಂಗ್ ರೇಪ್, ಕಳವು, ದರೋಡೆ, ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿ ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದರು.
ಆರೋಪಿತರಿಂದ ಮಾದಪಟ್ಟಣ ದಲ್ಲಿ ಕಳವು ಮಾಡಿದ್ದ ಕಟ್ಟಿಂಗ್, ಡ್ರಿಲಿಂಗ್ ಯಂತ್ರ, ಏರ್ಬ್ಲೋವರ್, ವ್ಯಾಕ್ಯೂಮ್ ಕ್ಲೀನರ್, ಗ್ರೆöÊಂಡಿAಗ್ ಯಂತ್ರ ಸೇರಿದಂತೆ ೧೧ ಯಂತ್ರೋ ಪಕರಣಗಳು, ವಿವಿಧೆಡೆ ಕಳವು ಮಾಡಿದ್ದ ೮ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.