ಚೆಟ್ಟಳ್ಳಿ, ಆ. ೨೪: ಬಾಳೆಲೆಯ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ತಾ.೨೫ ರಂದು (ಇಂದು) ಕೆಸರುಗದ್ದೆ ಕ್ರೀಡಾಕೂಟ ನಡೆಯಲಿದೆ.

ಬೆಳಿಗ್ಗೆ ೯ ಗಂಟೆಗೆ ನಿಟ್ಟೂರು ಗ್ರಾಮದ ಡಾ. ಬೆಳ್ಯಪ್ಪ ಅವರ ಗದ್ದೆಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ವೈದ್ಯ ಮಾಪಂಗಡ ಡಾ. ಪ್ರತಾಪ್ ಬೆಳ್ಳಿಯಪ್ಪ ಎಂ.ಎಸ್. ಉದ್ಘಾಟಿಸಲಿದ್ದಾರೆ.

ಸಂಜೆ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಕಾಫಿ ಬೆಳೆಗಾರ ಅಳಮೇಂಗಡ ವಿವೇಕ್ ಅಯ್ಯಪ್ಪ, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ದಾನಿ ಕಾಯಮಾಡ ರಾಜ ಬೆಳ್ಯಪ್ಪ, ಬಾಳೆಲೆ ಎಪಿಸಿಎಂಸಿ ನಿರ್ದೇಶಕ ಕಾಡ್ಯಮಾಡ ಉದಯ, ಉತ್ತಪ್ಪ ಭಾಗವಹಿಸಲಿದ್ದಾರೆ.