‘ಮುತ್ತು..’ ಎರಡಕ್ಷರದ ಈ ಪದಕ್ಕೆ ಎಷ್ಟೊಂದು ಮಹತ್ವ., ಅರ್ಥವಿದೆ ಅಲ್ವಾ..? ಸಮುದ್ರದ ಆಳದಲ್ಲಿ ಸಿಗುವ ಬೆಲೆ ಆಳುವ ಮುತ್ತು ಒಂದೆಡೆಯಾದರೆ ಮತ್ತೊಂದು ಒಬ್ಬರು ಮತ್ತೊಬ್ಬರಿಗೆ ಪ್ರೀತಿಯಿಂದ ನೀಡುವ ಸಿಹಿ ಮುತ್ತು... ಕಡಲಿನಲ್ಲಿ ದೊರಕುವ ಮುತ್ತು ಅತ್ಯಂತ ಬೆಲೆಬಾಳುವಂತಾಗಿದೆಯಾದರೂ ನಾವು-ನೀವು ಕೊಡುವ ಸಿಹಿ ಮುತ್ತು ಅದಕ್ಕಿಂತಲೂ ಮಿಗಿಲಾದುದು...! ಅದರಲ್ಲೂ ಒಂದಿಷ್ಟು ಮೇಕಪ್ ಮಾಡಿಕೊಂಡು ಅಧರವನ್ನು ಸಿಹಿಯಾಗಿಸಿಕೊಂಡು ಕೊಡುವ ಮುತ್ತಿನ ಮತ್ತೇ ಗಮ್ಮತ್ತು...!
ಒಂದು ಮುತ್ತಿನ ಬಗ್ಗೆ ಇಷ್ಟೊಂದು ಪೀಟಿಕೆ ಯಾಕೆಂದು ಆಶ್ಚರ್ಯವಾಗುತ್ತಿರಬಹುದಲ್ಲವೇ...? ಬೇರೇನೂ ಇಲ್ಲ., ಮುತ್ತಿನ ಮಹತ್ವದ ಬಗ್ಗೆ ತಿಳಿಸಲಷ್ಟೇ...! ಮುತ್ತು ಕೊಡುವದಕ್ಕೂ., ಮೇಕಪ್ ಮಾಡಿಕೊಳ್ಳುವದಕ್ಕೂ ಒಂದು ದಿನವಿದೆ ಎಂದು ನೆನಪಿಸಲಷ್ಟೇ...!
ಜಗತ್ತಿನ ಸೃಷ್ಟಿಯಲ್ಲಿ ಜೀವ ತಳೆದಿರುವ ಪ್ರಾಣಿ, ಪಕ್ಷಿ ಹಾಗೂ ಮನುಜರಲ್ಲಿ ಸುಖ-ದುಃಖಗಳನ್ನು ವ್ಯಕ್ತಪಡಿಸಲು ವಿವಿಧ ರೀತಿಯ ಆಯಾಮಗಳನ್ನು ಆ ಭಗವಂತ ಕೊಡುಗೆಯಾಗಿ ನೀಡಿದ್ದಾನೆ. ಅದರಲ್ಲೊಂದು ಪ್ರೀತಿ., ಮನಸಿಗೆ ಖುಷಿಯಾದಾಗ., ಬೇಜಾರಾದಾಗ ಅದನ್ನು ವ್ಯಕ್ತಪಡಿಸಲು ಪ್ರೀತಿ ಒಂದು ಮಾರ್ಗವಾಗಿದೆ. ಪ್ರೀತಿಯಲ್ಲೂ ಒಂದು ಮುತ್ತನ್ನಿಟ್ಟಾಗ ಸಿಗುವ ಆನಂದವೇ ಬೇರೆ...! ದುಃಖವಾದಾಗಲೂ, ಪ್ರೀತಿ ಪಾತ್ರರಾದವರಿಗೆ, ಪ್ರಾಣಿ-ಪಕ್ಷಿಗಳ ಹಣೆಗೊಂದು ಮುತ್ತನಿಟ್ಟರೆ ಅದರಲ್ಲಿ ಸಿಗುವ ಸಮಾಧಾನ ವರ್ಣಿಸಲಸದಳ. ಹಾಗಾಗಿ ಮುತ್ತಿಗೆ ಶ್ರೇಷ್ಠ ಸ್ಥಾನವಿದೆ ಈ ಜಗತ್ತಿನಲ್ಲಿ...!
ಮುತ್ತಿಗೂ ಒಂದು ದಿನ...!
ಮುತ್ತು(ಕಿಸ್) ಕೊಡುವದರಿಂದ ಅದು ಹೃದಯಕ್ಕೆ ಹತ್ತಿರವಾಗುತ್ತದೆ ಎಂದು ಹೇಳಲಾಗುತ್ತದೆ. ಒಂದು ಮುತ್ತಿನಿಂದ ನಮ್ಮ ದೇಹದಲ್ಲಿರುವ ೭೬ ಸಾವಿರ ನರ ನಾಡಿಗಳೂ ಕಂಪನದೊAದಿಗೆ ಜಾಗೃತಗೊಳ್ಳುತ್ತವೆ. ಹಾಗಾಗಿ ಆ ಒಂದು ಮುತ್ತಿನ ಮಹತ್ವವನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ಮುತ್ತು ಕೊಡುವದಕ್ಕೂ ಒಂದು ದಿನವನ್ನು ನಿಗದಿಪಡಿಸಲಾಗಿದೆ. ಅದು ಆಗಸ್ಟ್ ೨೫. ಇಂದು ಆ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ವ್ಯಾಲೈಂಟೈನ್ ದಿನಾಚರಣೆ ಅಂಗವಾಗಿ ಫೆಬ್ರವರಿ ೧೩ ರಂದು ಕೂಡ ಕಿಸ್ ದಿನವನ್ನಾಗಿ ಗುರುತಿಸಲಾಗಿದೆಯಾದರೂ ಪ್ರತ್ಯೇಕವಾಗಿ ಆಗಸ್ಟ್ ೨೫ ರಂದು ಇದನ್ನು ಆಚರಿಸಲಾಗುತ್ತಿದೆ. ನ್ಯೂಯಾರ್ಕ್ನ ಹಿಲ್ಟನ್ನಲ್ಲಿ ಜಾಕ್ವೆಲಿನ್ ಮಿಲ್ಟನ್ ಎಂಬಾತ ಮೊದಲ ಬಾರಿಗೆ ಈ ದಿನವನ್ನು ಆಚರಣೆಗೆ ತಂದಿರುವದಾಗಿ ದಾಖಲೆಗಳಲ್ಲಿದೆ. ಇದರೊಂದಿಗೆ ಮೇಕಪ್ ಮಾಡಲೂ ಸಹ ಈ ದಿನವನ್ನು ಪರಿಗಣಿಸಲಾಗಿದೆ.
ಆಚರಣೆ ಹೇಗೇ...?
ರಾಷ್ಟಿçÃಯ ಕಿಸ್ ಮತ್ತು ಮೇಕಪ್ ದಿನವನ್ನು ಆಚರಿಸಲು ಉತ್ತಮ ಮಾರ್ಗವೆಂದರೆ ಕಿಸ್ ಮಾಡುವದು ಮತ್ತು ಮೇಕಪ್ ಮಾಡುವದಾಗಿದೆ. ಯಾರೊಂದಿಗಾದರೂ ಜಗಳವಾಡಿದರೆ, ಮತ್ತೆ ಅವರೊಂದಿಗೆ ಬಾಂಧವ್ಯ ಬೆಳೆಸಲಿಚ್ಚಿಸಿದರೆ ಅವರನ್ನೊಮ್ಮೆ ಆಲಿಂಗಿಸಿಕೊAಡು ಒಂದು ಮುತ್ತು ಕೊಡಿ ಸಾಕು. ಅಥವಾ ಕ್ಷಮಾಪಣೆ ಕೇಳುವ ಯಾವದಾದ ರೊಂದು ಉಡುಗೊರೆಯೊಂದಿಗೆ ಒಂದು ಮುತ್ತನ್ನು ಕಳುಹಿಸಿಕೊಡಿ ಬಾಂಧವ್ಯ ಗಟ್ಟಿಯಾಗಲಿದೆ.
ಕೊಟ್ಟು ಕೆಡಬೇಡಿ...
ಮುತ್ತು ಎಷ್ಟು ಚಂದವೋ ಅಷ್ಟೇ ಅಪಾಯಕಾರಿ ಕೂಡ., ಸಿಹಿಯಾದ ಒಂದು ಮುತ್ತು ಉನ್ಮಾದದೊಂದಿಗೆ ತೇಲಾಡುವಂತೆ ಮಾಡಿದರೆ, ಅಹಿತಕರ ಮುತ್ತು ಭಾವನೆಗಳನ್ನು ಕೆರಳುವಂತೆ ಮಾಡಲೂಬಹುದು. ಈ ಬಗ್ಗೆ ಎಚ್ಚರವಿರಬೇಕಾಗುತ್ತದೆ. ಮುತ್ತು ಕೊಡುವ ಮುನ್ನ ಎಚ್ಚರವಹಿಸುವದೊಳಿತು. ಇಲ್ಲವಾದಲ್ಲಿ ‘ಪ್ರಥಮ ಚುಂಬನA ದಂತ ಭಗ್ನಂ’ ಎಂಬ ಗಾದೆ ಮಾತಿನಂತೆ ದವಡೆಯ ಹಲ್ಲುಗಳಿಗೆ ಕೆಡುಕಾಗಲೂ ಬಹುದು...! ಕಿಸ್ ವಿಚಾರ ಬಂದಾಗ ಪ್ರೇಮಿಗಳು ನಾಚಿಕೊಳ್ಳುತ್ತಾರೆ., ವಯಸ್ಸಾದವರು ಮುಜುಗರ ಪಟ್ಟುಕೊಳ್ಳುತ್ತಾರೆ., ಚಿಕ್ಕವರು ಗೊತ್ತಿದ್ದರೂ ಗೊತ್ತಿಲ್ಲದಂತೆ ನಾಟಕ ಮಾಡುತ್ತಾರೆ. ಒಟ್ಟಿನಲ್ಲಿ ಮುತ್ತೇ ಜಗದ ನಿಯಮ...!
ಮುತ್ತು, ರತ್ನಗಳೊಂದಿಗೆ ಬೆಲೆ ಕಟ್ಟಲಾಗದ ಸಿಹಿ ಮುತ್ತು ಕೊಡುತ್ತಾ ಖುಷಿ ಖುಷಿಯಾಗಿರೋಣ...!
? ಕುಡೆಕಲ್ ಸಂತೋಷ್