ಗೋಣಿಕೊಪ್ಪ, ಆ. ೨೪: ಕ್ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಮಹಾಸಭೆಯನ್ನು ಸೆಪ್ಟೆಂಬರ್ ೨೦ ರಂದು ಪೊನ್ನಂಪೇಟೆ ಇಗ್ಗುತ್ತಪ್ಪ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಪಿ. ಸೋಮಣ್ಣ ತಿಳಿಸಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಗೌರವಿಸಲಾಗುವುದು. ೨೦೦೦, ೧೫೦೦, ೧,೦೦೦ ನಗದು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸದಸ್ಯರು ಸೆಪ್ಟೆಂಬರ್ ೧೭ ರೊಳಗೆ ಮಕ್ಕಳ ಅಂಕಪಟ್ಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಲು ತಿಳಿಸಿದರು.
ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಸದಸ್ಯರ ಸಹಕಾರದಿಂದ ವೇದಿಕೆ ಸಾಕಷ್ಟು ಜನಪರ ಕಾರ್ಯ ನಡೆಸುತ್ತಿದೆ. ಮೂರನೇ ಮಹಾಸಭೆ ನಡೆಸುವಷ್ಟು ವೇದಿಕೆ ಬೆಳವಣಿಗೆ ಕಂಡಿದೆ. ಹಿರಿಯ ವಯಸ್ಸಿನಲ್ಲಿ ಎಲ್ಲರೂ ಸೇರಲು ಅವಕಾಶ ದೊರಕಿದೆ ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಚೇಂದಿರ ಬೋಪಣ್ಣ, ಖಜಾಂಚಿ ಐನಂಡ ಮಂದಣ್ಣ, ನಿರ್ದೇಶಕರಾದ ಕೇಚೇಟೀರ ಕಾಮುಣಿ ಪೂಣಚ್ಚ ಇದ್ದರು.