ಸೋಮವಾರಪೇಟೆ,ಆ.೨೩: ಕಾನೂನು ಸುವ್ಯವಸ್ಥೆಯೊಂದಿಗೆ ಗೌರಿ ಗಣೇಶೋತ್ಸವ ಆಚರಣೆಗೆ ಸಮಿತಿ ಪದಾಧಿಕಾರಿಗಳು ಕ್ರಮ ವಹಿಸಬೇಕು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಡಿ.ವೈ.ಎಸ್.ಪಿ. ಗಂಗಾಧರಪ್ಪ ಸೂಚಿಸಿದರು.

ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಗಣೇಶೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ವಾತಂತ್ರö್ಯ ಪೂರ್ವದಲ್ಲಿ ಬಾಲಗಂಗಾಧರನಾಥ್ ತಿಲಕ್ ಅವರು ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಗಣಪತಿ ಹಬ್ಬವನ್ನು ಆಚರಣೆಗೆ ತಂದರು. ಆ ಸಮಯದಲ್ಲಿ ಯುವಕರನ್ನು ಹುರಿದುಂಬಿಸುತ್ತಾ ಭಜನೆ ಸಂಗೀತ ನಾಟಕಗಳನ್ನು ಮಾಡುತ್ತಾ ಯುವಕರನ್ನು ಒಗ್ಗೂಡಿಸುತ್ತಿದ್ದರು. ಈಗ ಆ ನಿಟ್ಟಿನಲ್ಲಿ ಗಣೇಶೋತ್ಸವ ಸಾಗುತಿಲ್ಲ. ಮೋಜು ಮಸ್ತಿ ಮಾಡಲು ಆಚರಣೆಗೆ ಮುಂದಾಗಬಾರದು. ಶ್ರದ್ಧಾಭಕ್ತಿಯಿಂದ ಆಚರಣೆ ನಡೆಯಬೇಕು ಎಂದರು.

ಉತ್ಸವ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಬೇಕು. ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೋತ್ಸವ ಸಂದರ್ಭ ಹೆಚ್ಚು ಜಾಗ್ರತೆ ವಹಿಸಬೇಕು. ಸಮಯ ಮತ್ತು ಶಬ್ದದ ಬಗ್ಗೆ ಗಮನಹರಿಸಬೇಕು. ವಾದ್ಯಗೋಷ್ಠಿಗೆ ರಾತ್ರಿ ೧೧ರವರೆಗೆ ಮಾತ್ರ ಅವಕಾಶವಿದ್ದು, ನಿಗದಿತ ಶಬ್ದದೊಂದಿಗೆ ಡಿ.ಜೆ.ಗೆ ರಾತ್ರಿ ೧೦ ಗಂಟೆವರೆಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಉತ್ಸವ ಸಂದರ್ಭ ಯಾವುದೇ ಸಮಸ್ಯೆಗಳು ಕಂಡುಬAದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸೋಮವಾರಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಮುದ್ದು ಮಾದೇವ್. ಸಬ್‌ಇನ್ಸ್ಪೆಕ್ಟರ್‌ಗಳಾದ ಗೋಪಾಲ್, ರವಿ, ಶಿವಲಿಂಗ ಅವರುಗಳು ಉಪಸ್ಥಿತರಿದ್ದರು. ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ಸಮಿತಿ ಸದಸ್ಯರುಗಳಿಂದ ಗಣಪತಿ ಪ್ರತಿಷ್ಠಾಪಿಸುವ ದಿನಾಂಕ, ವಿಸರ್ಜಿಸುವ ದಿನಾಂಕಗಳ ಬಗ್ಗೆ ಮಾಹಿತಿ ಪಡೆದರು.