ಕೂಡಿಗೆ, ಆ. ೨೩: ಚಿಕ್ಕ ಅಳುವಾರ ಗ್ರಾಮದಲ್ಲಿ ಶ್ರೀ ರಾಮಲಿಂಗ ಬನಶಂಕರಿ ದೇವಾಂಗ ಸಮಿತಿಯ ವತಿಯಿಂದ ಶ್ರಾವಣ ಮಾಸದ ನೂಲು ಹುಣ್ಣಿಮೆ ದಿನದಂದು ಚಿಕ್ಕ ಅಳುವಾರ ಗ್ರಾಮದಲ್ಲಿ ದೇವಾಂಗ ಸಮುದಾಯ ದವರು ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ನೂಲು ಹುಣ್ಣಿಮೆ ಆಚರಣೆ ನಡೆಸಿದರು.

ಗ್ರಾಮದ ಪ್ರಮುಖ ಕೆರೆಯಲ್ಲಿ ಪ್ರಥಮವಾಗಿ ಗಂಗಾ ಪೂಜೆ ಸಲ್ಲಿಸಿ, ನಂತರ ಕಳಸವನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿ ಅಳುವಾರದಮ್ಮ ದೇವಾಲಯದ ಆವರಣವನ್ನು ತಲುಪಿ, ನಂತರ ವಿಶೇಷ ಪೂಜೆ ಹೋಮ ಹವನಗಳ ನಂತರ ಸಾಮೂಹಿಕವಾಗಿ ನೂಲು ಧಾರಣೆ (ಜನಿವಾರ ಧರಿಸುವ) ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ದೇವಾಂಗ ಸಂಘದ ಅಧ್ಯಕ್ಷ ಡಿ.ಆರ್. ಪ್ರೇಮಕುಮಾರ್, ಕಾರ್ಯದರ್ಶಿ ಎ.ಪಿ. ಸುನಿಲ್, ಖಜಾಂಚಿ ಲೋಕೇಶ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.