ವೀರಾಜಪೇಟೆ, ಆ. ೨೩: ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿಯನ್ನು ಎಸ್.ಎನ್.ಡಿ.ಪಿ ವೀರಾಜಪೇಟೆ ಶಾಖೆಯ ವತಿಯಿಂದ ಆಚರಿಸಲಾಯಿತು.

ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ವೀರಾಜಪೇಟೆ ಶಾಖೆಯ ವತಿಯಿಂದ ನಗರ ಗೌರಿಕೆರೆ ರಸ್ತೆಯಲ್ಲಿರುವ ಶಾಖೆಯ ಕಚೇರಿಯಲ್ಲಿ ಶ್ರೀ ನಾರಾಯಣ ಗುರುವಿನ ೧೭೦ನೇ ಜಯಂತಿಯನ್ನು ಆಚರಿಸಲಾಯಿತು. ಶ್ರೀ ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮಾತನಾಡಿದ ಶಾಖೆಯ ಅದ್ಯಕ್ಷ ಟಿ.ಎ. ನಾರಾಯಣ ಶೋಷಿತ ವರ್ಗಗಳಿಗೆ ಶ್ರೀ ನಾರಾಯಣ ಗುರು ದೇವರಿಗೆ ಸಮಾನವಾದವರು. ಎಲ್ಲರಂತೆ ನಾವು ಬದುಕು ಕಂಡುಕೊಳ್ಳಬೇಕು. ಜಾತೀಯತೆಯನ್ನು ಹೋಗಲಾಡಿ ಸುವುದರಲ್ಲಿ ಹೋರಾಟ ಮಾಡಿ ದೇಗುಲ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟಿರುವ ಧೀಮಂತ ಸಂತ. ಜನಾಂಗ ಮತ್ತು ಸಮುದಾಯವು ಉನ್ನತ್ತೀಕರಣವಾಗಬೇಕು ಈ ನಿಟ್ಟಿನಲ್ಲಿ ಸರ್ವರು ಶಿಕ್ಷಣ ಪಡೆಯಬೇಕು. ಶಿಕ್ಷಣವಂತ ಸಮಾಜ ನಿರ್ಮಾಣ ಮಾಡುವಲ್ಲಿ ಸರ್ವರು ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಟಿ.ಆರ್. ಗಣೇಶ್, ಕಾರ್ಯದÀರ್ಶಿ ಟಿ.ಕೆ. ಪದ್ಮನಾಭ, ಸಮಿತಿಯ ನಿರ್ದೇಶಕರಾದ, ಕೆ.ಬಿ. ಹರೀಶ್, ಕೆ.ಕೆ. ಅನಿಲ್, ಟಿ.ಡಿ. ಹರೀಶ್, ಕೆ.ಎನ್. ಉಪೇಂದ್ರ, ಭಾಸ್ಕರ, ಪ್ರಭಾ, ಜನಾರ್ಧನ, ಸುಬ್ರಮಣಿ ಮತ್ತು ಕೆ.ಸಿ. ಶಶಿ ಹಾಗೂ ಶಾಖೆಯ ಸದಸ್ಯರು ಮತ್ತು ಸಮುದಾಯ ಬಾಂಧವರು ಹಾಜರಿದ್ದರು.