ಮುಳ್ಳೂರು, ಆ. ೨೩: ಭಾರತೀಯ ಕಾಫಿ ಮಂಡಳಿ ಸೋಮವಾರಪೇಟೆ ವಿಭಾಗ ವತಿಯಿಂದ ಸಮೀಪದ ನಂದಿಗುAದ ಗ್ರಾಮದ ದೇವಸ್ಥಾನ ಸಮುದಾಯ ಭವನದಲ್ಲಿ ಕಾಫಿ ಕೃಷಿ ಕಾರ್ಯಾಗಾರ ಮತ್ತು ಸಬ್ಸಿಡಿ ಯೋಜನೆ ಕುರಿತಾಗಿ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಾಗಾರದಲ್ಲಿ ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ರಂಜಿತ್‌ಕುಮಾರ್ ಮಾಹಿತಿ ನೀಡಿ, ಕಾಫಿ ಕೃಷಿಯ ಉಳಿವಿಗಾಗಿ ಬೆಳೆಗಾರರು ಪ್ರಯತ್ನಿಸಬೇಕು. ಕಾಫಿ ಮಂಡಳಿಯ ಸಲಹೆ ಮಾಹಿತಿಯನ್ನು ಪಡೆದುಕೊಂಡು ಕಾಫಿ ತೋಟವನ್ನು ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಬೆಳೆಗಾರರು ಕಾಫಿ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಪ್ರಯತ್ನಿಸಬೇಕಿದೆ ಎಂದರು.ಕಾಫಿ ಮಂಡಳಿ ಮೂಲಕ ಬೆಳೆಗಾರರಿಗೆ ತೋಟದಲ್ಲಿ ಕೆರೆ ಮತ್ತು ಇತರೆ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು ರೂ. ೨.೫ ಲಕ್ಷದವರೆಗೆ ಸಹಾಯಧನ ನೀಡುತ್ತದೆ. ಆದರೆ ಸಹಾಯಧನ ಪಡೆದುಕೊಳ್ಳುವ ಬೆಳೆಗಾರರು ಕಾಫಿ ಮಂಡಳಿಯ ನಿಯಮದಂತೆ ಕೆರೆಯನ್ನು ನಿರ್ಮಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೆಳೆಗಾರರು ಕಾಫಿ ಮಂಡಳಿಯ ಯೋಜನೆಯನ್ನು ಸದುಪಯೋಗಿಸಿಕೊಳ್ಳುವಂತೆ ಮನವಿ ಮಾಡಿದರು. ಸೋಮವಾರಪೇಟೆ ತಾಲೂಕು ರೈತ ಸಂಘದ ಮುಖಂಡ ಮೊಗಪ್ಪ, ನಂದಿಗುAದ ಗ್ರಾಮದ ಮುಖಂಡ ರುದ್ರಪ್ಪ, ಪ್ರಮುಖರಾದ ಹೆಗ್ಗುಳ ಪುಟ್ಟಸ್ವಾಮಿ, ಜಿ.ಎಂ. ಚಂದ್ರಶೇಖರ್, ಪರಮೇಶ್, ನಿಂಗಸ್ವಾಮಿ, ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮುಂತಾದವರಿದ್ದರು.