ಗೋಣಿಕೊಪ್ಪಲು, ಆ. ೨೩: ಗೋಣಿಕೊಪ್ಪ ಶ್ರೀ ನಾರಾಯಣ ಧರ್ಮ ಪರಿಪಾಲನಾ ಶಾಖಾ ಯೋಗಂ ಆಚರಣಾ ಸಮಿತಿ ವತಿಯಿಂದ ೧೭೦ನೇ ಶ್ರೀನಾರಾಯಣ್ ಗುರು ಜಯಂತಿ ಆಚರಣೆಯು ಗೋಣಿಕೊಪ್ಪ ಪಟೇಲ್ ನಗರದ ನಾರಾಯಣ ಗುರು ಸಭಾಂಗಣದಲ್ಲಿ ಆ.೨೫ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯಲಿದೆ.

ಶ್ರೀನಾರಾಯಣ್ ಗುರು ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷÀ ಪಿ.ಜಿ.ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾಧ್ಯಕ್ಷರಾದ ವಿ.ಕೆ.ಲೋಕೇಶ್ ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಬಿ.ಎನ್.ಪ್ರಕಾಶ್ ಗೌರವ ಉಪಸ್ಥಿತಿಯಲ್ಲಿ ತಲಚೇರಿಯ ನಿವೃತ್ತ ಶಿಕ್ಷಕರಾದ ಎಸ್.ಕೆ. ವಿನಯನ್ ವಿಚಾರ ಮಂಡನೆ ಮಾಡಲಿದ್ದು, ಅತಿಥಿಗಳಾಗಿ ಗೋಣಿಕೊಪ್ಪ ಗ್ರಾ.ಪಂ.ಸದಸ್ಯರಾದ ಸಿ.ಡಿ.ಧ್ಯಾನ್ ಸುಬ್ಬಯ್ಯ, ಶ್ರೀನಾರಾಯಣ್ ಗುರು ಧರ್ಮ ಪಾಲನಾ ಶಾಖಾ ಯೋಗಂನ ಗೋಣಿಕೊಪ್ಪ ಅಧ್ಯಕ್ಷÀ ಟಿ.ಕೆ.ಪುರುಷೋತ್ತಮ್, ಶ್ರೀನಾರಾಯಣ್ ಗುರು ಧರ್ಮ ಪಾಲನಾ ಶಾಖಾ ಯೋಗಂನ ಗೋಣಿಕೊಪ್ಪಲುವಿನ ಮಹಿಳಾ ಅಧ್ಯಕ್ಷೆ ರಮಾವತಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸಲಾಗುವುದು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.