ಮಡಿಕೇರಿ, ಆ. ೨೩: ಅಮ್ಮತ್ತಿ ಬ್ಲೂಸ್ಟಾರ್ ವತಿಯಿಂದ ೭೮ನೇ ಸ್ವಾತಂತ್ರ÷್ಯ ದಿನಾಚರಣೆಯ ಅಂಗವಾಗಿ ನಡೆದ ಮೂರನೇ ವರ್ಷದ ೬+೧ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಮ್ಮತ್ತಿ ಕೆ-೧೨ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ದ್ವಿತೀಯ ಸ್ಥಾನಕ್ಕೆ ಬ್ಲೂ ಸ್ಟಾರ್ ತೃಪ್ತಿಪಟ್ಟುಕೊಂಡಿತು.

ಅಮ್ಮತ್ತಿಯ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆದ ರೋಚಕ ಪಂದ್ಯಾವಳಿಯಲ್ಲಿ ಒಟ್ಟು ೧೨ ತಂಡಗಳು ಟ್ರೋಫಿಗಾಗಿ ಸೆಣೆಸಾಡಿದವು. ಬೆಸ್ಟ್ ಸ್ಟೆçöÊಕರ್ ರಾಕೇಶ್, ಬೆಸ್ಟ್ ಪ್ಲೇಯರ್‌ಆಗಿ ವಿಜು, ಬೆಸ್ಟ್ ಡಿಫೆಂಡರ್ ಶ್ಯಾಲುಂ, ಬೆಸ್ಟ್ ಗೋಲ್‌ಕೀಪರ್ ಪ್ರೇಮ್, ಬೆಸ್ಟ್ ಸೀನಿಯರ್ ಪ್ಲೇಯರ್ ವಿನು ಪ್ರಶಸ್ತಿಯನ್ನು ಪಡೆದುಕೊಂಡರು. ತೀರ್ಪುಗಾರರಾಗಿ ಹಿರಿಯ ಕ್ರೀಡಾಪಟು ಗಣೇಶ್ ಕಾರ್ಯನಿರ್ವಹಿಸಿದರು.

ಅಮ್ಮತ್ತಿ ಚೌಡೇಶ್ವರಿ ನಗರದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಹಾಗೂ ಚೌಡೇಶ್ವರಿ ದೇವಾಲಯದ ಮಾಜಿ ಕಾರ್ಯದರ್ಶಿ ಹರೀಶ್ ಪಂದ್ಯಾವಳಿಯನ್ನು ಉದ್ಘಾಟಿಸಿದರು.

ಪ್ರಥಮ ವಿಜೇತರಿಗೆ ದಾನಿಗಳಾದ ಸಾಗರ್ ತಮ್ಮ ತಂದೆ ಆನಂದ್ (ಬಿ.ಎಸ್.ಎನ್.ಎಲ್) ಅವರ ಜ್ಞಾಪಕಾರ್ಥವಾಗಿ ನೀಡಿದ ಟ್ರೋಫಿಯನ್ನು ಬಹುಮಾನವಾಗಿ ವಿತರಿಸಲಾಯಿತು. ದ್ವಿತೀಯ ವಿಜೇತರಿಗೆ ವೀರಾಜಪೇಟೆಯ ೩ ಸ್ಟಾರ್ ಹೊಟೇಲ್‌ನ ಮಾಲೀಕ ಜುಬೇರ್ ನೀಡಿದ ಟ್ರೋಫಿಯನ್ನು ನೀಡಲಾಯಿತು. ವೈಯಕ್ತಿಕ ಬಹುಮಾನವನ್ನು ನಿತೇಶ್ ಮತ್ತು ರಾಮು, ಹರೀಶ್ ಅಮ್ಮತ್ತಿ ತಮ್ಮ ತಂದೆ ಮಹೇಶ್ ಅಂಧಾನಿ ಅವರ ಜ್ಞಾಪಕರ್ಥವಾಗಿ, ಅಮ್ಮತ್ತಿಯ ಸರೋಜ, ಮೋಹನ್, ಚಾಯ್ಸ್ ಎಲೆಕ್ಟಿçಕಲ್ಸ್ನ ಹನೀಫ್ ವಿತರಿಸಿದರು.

ಪ್ರಥಮ ವೈಯಕ್ತಿಕ ಬಹುಮಾನವನ್ನು ಅಶ್ವತ್ ಅವರು ತಮ್ಮ ತಂದೆ ಚಂದನ್ ಅವರ ಜ್ಞಾಪಕಾರ್ಥವಾಗಿ, ದ್ವಿತೀಯ ವೈಯಕ್ತಿಕ ಬಹುಮಾನವನ್ನು ಎಂ.ಜಿ. ಲಾಂಡ್ರಿ ಮಾಲೀಕ ಅಶೋಕ್ ಪೂಜಾರಿ ನೀಡಿದ್ದಾರೆ.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಚೌಡೇಶ್ವರಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಹೆಚ್.ಎಸ್. ವೆಂಕಟೇಶ್, ಖಜಾಂಚಿ ಹೆಚ್.ಕೆ. ಅವಿನಾಶ್, ಮಾಜಿ ಕಾರ್ಯದರ್ಶಿ ಹೆಚ್.ಕೆ. ಹರೀಶ್ ಅಂದಾನಿ ಹಾಗೂ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ವಿ.ಆರ್. ಸತೀಶ್, ಕಾಫಿ ಬೆಳೆಗಾರ ಪಾಲಯತಂಡ ಹರಿ, ಬಿ. ಶೇಷಮ್ಮ, ಎಸ್.ಆರ್.ಎಸ್ ಆಟೋ ಲಿಂಕ್ಸ್ನ ಸಿ.ಎಂ. ರಶೀದ್, ಸಿದ್ದಾಪುರ ನಿಯೋನ್ ಕಾಫಿ ವರ್ಕ್ಸ್ ಕೆ.ವೈ. ಸಮೀರ್, ವಾಹನ ಚಾಲಕ ಟಿ.ಎ. ಅಶ್ರಫ್, ಪಾಲಿಬೆಟ್ಟ ತ್ರಿ ಸ್ಟಾರ್ ಮಾಲೀಕ ಝಬೈರ್, ಪ್ರಮುಖರಾದ ಎಸ್. ಶ್ರೀನಿವಾಸ್, ಹೆಚ್.ಎನ್. ಕಿರಣ ಹಾಜರಿದ್ದರು.