ಮಡಿಕೇರಿ, ಆ. ೨೨: ಕೈಲ್ಪೊಳ್ದ್ ಹಬ್ಬದ ಪ್ರಯುಕ್ತ ನೆಲಜಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಜರುಗುವ ಉತ್ಸವ ತಾ.೨೬ರಂದು ನಡೆಯಲಿದೆ. ಇದರ ಅಂಗವಾಗಿ ತುಲಾಭಾರ ಸೇವೆ, ಎತ್ತ್ಪೋರಾಟ, ಮಹಾಪೂಜೆ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ಜರುಗಲಿದೆ.
ತುಲಾಭಾರ ಸೇವೆ ಮಾಡಿಸುವ ಭಕ್ತರು ಮುಂಚಿತವಾಗಿ ದೇವಸ್ಥಾನ ತಕ್ಕ ಮುಖ್ಯಸ್ಥರನ್ನು ಸಂಪರ್ಕ ಮಾಡಬಹುದೆಂದು ತಕ್ಕಮುಖ್ಯಸ್ಥರು, ಆಡಳಿತ ಮಂಡಳಿಯವರು ತಿಳಿಸಿದ್ದಾರೆ.