ಕಡಂಗ, ಆ. ೨೨: ಕೊಡಗು ಜಿಲ್ಲೆಯ ಪ್ರಸಿದ್ಧ ಕಡಂಗ ಕೊಕ್ಕಂಡಬಾಣೆ ದರ್ಗಾ ಷರೀಫ್‌ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರ ಹೆಸರಿನಲ್ಲಿ ನಡೆಯುವ ೨೦೨೫ನೇ ಉರೂಸ್ ಕಾರ್ಯಕ್ರಮವನ್ನು ಜನವರಿ ೩೧ ರಿಂದ ಫೆಬ್ರವರಿ ೪ ರವರೆಗೆ ಆಚರಿಸಲಾಗುವುದು ಎಂದು ಮುಯದ್ದೀನ್ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ಲಾ ತಿಳಿಸಿದ್ದಾರೆ.

ದರ್ಗಾದಲ್ಲಿ ನÀಡೆದ ಕಾರ್ಯಕ್ರಮದಲ್ಲಿ ಖತೀಬ್ ಉಸ್ತಾದ್ ರಫೀಕ್ ಲತೀಫ್ ಪ್ರಾರ್ಥನೆ ಸಲ್ಲಿಸಿದರು. ಆಡಳಿತ ಮಂಡಳಿ ಸದಸ್ಯ ಅಬ್ದುರಹ್ಮಾನ್, ಸಲಾಂ, ರಜಾಕ್, ಅಂದಾಯಿ, ಇಸಾಕ್, ಹಿರಿಯರಾದ ಯೂಸುಫ್ ಉಸ್ತಾದ್, ಅಬ್ದುಲ್ಲಾ ಹಾಜಿ, ಹನೀಫ್ ಉಸ್ತಾದ್ ಉಪಸ್ಥಿತರಿದ್ದರು.