ಸೋಮವಾರಪೇಟೆ, ಆ. ೨೨: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಹೆಚ್.ಆರ್. ಉಮೇಶ್ ಆಯ್ಕೆಯಾಗಿದ್ದಾರೆ.

ಕೊಡವ ಸಮಾಜದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು ೩೬೮ ಮತಗಳು ಚಲಾವಣೆಯಾದವು. ಇದರಲ್ಲಿ ೧೧ ಮತಗಳು ಅಸಿಂಧುವಾಗಿದ್ದು, ಉಳಿದ ೩೫೭ ಮತಗಳ ಪೈಕಿ ೨೨೫ ಮತಗಳನ್ನು ಗಳಿಸುವ ಮೂಲಕ ಉಮೇಶ್ ಅವರು ಆಯ್ಕೆಯಾದರು. ಅಂತೆಯೇ ಉಪಾಧ್ಯಕ್ಷರಾಗಿ ಎಂ.ವೈ. ಜೀವನ್ ೧೩೮ ಮತಗಳಿಸಿದರು.

ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಶಫಿ, ಸಹ ಕಾರ್ಯದರ್ಶಿಯಾಗಿ ಪ್ರಸನ್ನ ಹಾಗೂ ಖಜಾಂಚಿಯಾಗಿ ಶಶಿಕುಮಾರ್ ಅವರುಗಳು ಅವಿರೋಧವಾಗಿ ಆಯ್ಕೆಯಾದರು.

ಇದಕ್ಕೂ ಮುನ್ನ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ಎಚ್.ಕೆ. ಗಂಗಾಧರ್ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷ ಟಿ.ಎಂ. ಅಬ್ದುಲ್ ಕರೀಂ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಉಪಕಾರ್ಯದರ್ಶಿ ಪಿ.ಎನ್. ರಮೇಶ್, ಖಜಾಂಚಿ ಸುದೀಪ್ ಆಲ್ಬರ್ಟ್ ಸೇರಿದಂತೆ ಗೌರವಾಧ್ಯಕ್ಷರು, ಗೌರವ ಸಲಹೆಗಾರರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.