ಕೂಡಿಗೆ, ಆ. ೨೧: ಭಾರೀ ಮಳೆಯಿಂದ ಕಳೆದ ೩ ವರ್ಷಗಳಿಂದ ದುಸ್ಥಿತಿಯಲ್ಲಿದ್ದ ಸೇತುವೆಗೆ ಗ್ರಾಮಸ್ಥರೆ ಹಣವಿನಿಯೋಗಿಸಿ ಕಾಯಕಲ್ಪ ನೀಡಿದ್ದಾರೆ. ಹಾರಂಗಿ ಸಮೀಪದ ಮಾವಿನಹಳ್ಳ ಗ್ರಾಮದ ಬಳಿ ಇರುವ ಕಿರು ಸೇತುವೆಯು ಅತಿಯಾದ ಮಳೆಯಿಂದಾಗಿ ಬೆಟ್ಟದ ನೀರಿನ ರಭಸಕ್ಕೆ ಕುಸಿತಗೊಂಡು ಮೂರು ವರ್ಷಗಳು ಕಳೆಯುತ್ತಾ ಬಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿರದ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಗ್ರಾಮಸ್ಥರೇ ಸೇರಿಕೊಂಡು ಹಣವನ್ನು ಹಾಕಿ ಮರಗಳನ್ನು ಖರೀದಿಸಿ ತಂದು, ಕಿರು ಸೇತುವೆಗೆ ಅಡ್ಡಲಾಗಿ ಅಡಿಕೆ ಮರದ ದಿಮ್ಮಿಗಳನ್ನು ಅಳವಡಿಸಿ ತಿರುಗಾಟಕ್ಕೆ ದಾರಿ ಮಾಡಿಕೊಂಡಿದ್ದಾರೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಹಳ್ಳ ಯಡವನಾಡು ಮತ್ತು ಐಗೂರು ಹಾರಂಗಿ ಸಂಪರ್ಕ ರಸ್ತೆ ಇದಾಗಿದ್ದು, ಈ ವ್ಯಾಪ್ತಿಯ ೫ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮುಖ್ಯ ರಸ್ತೆಯನ್ನು ಸಂಪರ್ಕಿಸಲು ೫ ಕಿ.ಮೀ. ದೂರವನ್ನು ಸುತ್ತಿ ಬರಬೇಕಾದ ಪರಿಸ್ಥಿತಿ ಇತ್ತು.

ಈ ಕಿರು ಸೇತುವೆಯಿಂದ ಹಾರಂಗಿ, ಮಾವಿನಹಳ್ಳ, ಯಡವನಾಡು ಮೂಲಕ ಐಗೂರು ಗ್ರಾಮಕ್ಕೆ ತಲುಪಿ ಸೋಮವಾರಪೇಟೆಗೆ ಹತ್ತಿರದ ಮಾರ್ಗವಾಗಿದೆ. ಅಲ್ಲದೆ ಈ ಕಿರು ಸೇತುವೆಯು ಯಡವನಾಡು-ಹುದುಗೂರು ಸಂಪರ್ಕ ರಸ್ತೆಯಾಗಿದ್ದು, ಈ ಭಾಗದ ಜನರು ಕುಶಾಲನಗರ ತೆರಳಲು ಮತ್ತು ಸೋಮವಾರಪೇಟೆ ಕುಶಾಲನಗರ ಹೆದ್ದಾರಿ ರಸ್ತೆಯು ಹತ್ತಿರದಾಗಿರುತ್ತದೆ. ಇದಕ್ಕೆ ಸಂಬAಧಿಸಿದAತೆ ಅನೇಕ ಬಾರಿ ಜಿಲ್ಲಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಅದಕ್ಕೆ ಸಂಬAಧಿಸಿದ ಇಂಜಿನಿಯರ್ ಸ್ಥಳ ಪರಿಶೀಲಿಸಿ ನಡೆಸಿ ಕಾಮಗಾರಿಯ ವರದಿಯನ್ನು ನೀಡಿದ್ದಾರೆ. ಆದರೆ ಇದುವರೆಗೂ ಯಾವುದೇ ರೀತಿಯ ಟೆಂಡರ್ ಪ್ರಕ್ರಿಯೆಗಳು ನಡೆದಿಲ್ಲ ಎಂದು ಗ್ರಾಮಸ್ಥರಾದ. ನಾಣಯ್ಯ ದೇವರಾಜ್, ಉದಯ, ಯತೀಶ್ ನಿಂಗಪ್ಪ ದೂರಿದರು. - ಕೆ.ಕೆ. ನಾಗರಾಜ ಶೆಟ್ಟಿ