ಮಡಿಕೇರಿ, ಆ. ೨೧: ನಗರ ದಸರಾ ಸಮಿತಿಯ ೨೦೨೩-೨೪ ನೇ ಸಾಲಿನ ಜಮಾ ಖರ್ಚು ಮಂಡನೆ ಸಭೆಯು ಮಡಿಕೇರಿ ನಗರದಸರಾ ಸಮಿತಿಯ ೨೦೨೩-೨೪ನೇ ಸಾಲಿನ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಆಗಸ್ಟ್ ೨೩ ರಂದು ಮಧ್ಯಾಹ್ನ ೩.೩೦ ಗಂಟೆಗೆ ನಗರಸಭೆಯ ಕಾವೇರಿ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಸಭೆ ಪ್ರಾರಂಭಕ್ಕೂ ಮೊದಲು ಮಧ್ಯಾಹ್ನ ೩ ಗಂಟೆಗೆ ವರ್ಷಂಪ್ರತಿ ಸಂಪ್ರದಾಯದAತೆ, ನಗರದ ಕಾಲೇಜು ರಸ್ತೆಯಲ್ಲಿರುವ ಶ್ರೀಪೇಟೆರಾಮ ಮಂದಿರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ನಗರ ದಸರಾ ಸಮಿತಿ ಸಭೆ ನಡೆಯಲಿದೆ ಎಂದು ನಗರ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.