ಸೋಮವಾರಪೇಟೆ, ಆ. ೨೧: ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಚನ್ನಾಪುರ ಗ್ರಾಮದ ಸಿ.ಎ. ಮಮತ ಅಶೋಕ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿದ್ದ ಎನ್.ಎಸ್. ಪರಮೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ, ಮರು ಚುನಾವಣೆ ನಿಗದಿಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಓರ್ವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಪಿ.ಬಿ. ಮೋಹನ್ ಘೋಷಿಸಿದರು.
ಉಪಾಧ್ಯಕ್ಷೆ ಮಮತ ಮಾತನಾಡಿ, ಸಂಘದ ಸದಸ್ಯರು ಹಾಗೂ ರೈತರ ಶ್ರೇಯೋಭಿವೃದ್ಧಿಗೆ ತನ್ನ ಅವಧಿಯಲ್ಲಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭ ಅಧ್ಯಕ್ಷ ಹೆಚ್.ಆರ್. ಸುರೇಶ್, ಆಡಳಿತ ಮಂಡಳಿ ಸದಸ್ಯರಾದ ಎಸ್.ಬಿ. ಭರತ್ಕುಮಾರ್, ಜಿ.ಪಿ. ಸುನೀಲ್, ವಿ.ಎನ್. ನಾಗರಾಜು, ಕೆ.ಜಿ. ದಿನೇಶ್, ಸಿ.ಈ. ವೆಂಕಟೇಶ್, ಜಿ.ಈ. ಸುರೇಶ್, ಪುಷ್ಪ ಸುರೇಶ್, ಸುಮಿತ್ರ ಮಹೇಶ್, ವಾಣಿ ಶಿವಕುಮಾರ್, ಸಿ.ಇ.ಓ. ಕಿರಣ್ ಉಪಸ್ಥಿತರಿದ್ದರು.