ಚೆಯ್ಯಂಡಾಣೆ, ಆ. ೨೧: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯದ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ನಾಪೋಕ್ಲು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೆಯ್ಯAಡಾಣೆಯಲ್ಲಿ ಪೊಲೀಸ್ ತಪಾಸಣೆ ವೇಳೆ ವೀರಾಜಪೇಟೆ ಕಡೆಯಿಂದ ಚೆಯ್ಯಂಡಾಣೆ ಮಾರ್ಗವಾಗಿ ಮರಂದೋಡ ಗ್ರಾಮದ ಕೆರೆತಟ್ಟು ಪೈಸಾರಿ ನಿವಾಸಿ ಪೂವಪ್ಪ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ (ಏಂ೧೨W ೮೦೪೯) ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಸಂದರ್ಭ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.