ಮಡಿಕೇರಿ, ಆ. ೨೦: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಈತನಕ ಸರಾಸರಿ ೯೬.೪೪ ಇಂಚು ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ೪೫.೫೮ ಇಂಚುಗಳಷ್ಟು ಮಳೆಯ ಪ್ರಮಾನ ಹೆಚ್ಚಳವಾಗಿದೆ. ಕಳೆದ ವರ್ಷ ಆ.೨೦ರ ತನಕ ಜಿಲ್ಲೆಯಲ್ಲಿ ಕೇವಲ ಸರಾಸರಿ ೫೦.೮೬ ಇಂಚುಗಳಷ್ಟು ಮಾತ್ರ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ೧೩೬.೮೯ ಇಂಚುಗಳಷ್ಟು ಭಾರೀ
ಮಳೆ ದಾಖಲಾಗಿದೆ. ಈ ತಾಲೂಕಿನಲ್ಲಿಯೂ ಈ ಬಾರಿ ೫೦.೩೭ ಇಂಚು ಅಧಿಕ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ತಾಲೂಕಿನಲ್ಲಿ ೮೬.೫೨ ಇಂಚು ಮಳೆಯಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ೮೭.೪೦ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೩೯.೧೧ ಇಂಚು ಮಳೆಯಾಗಿದ್ದು, ಈ ಬಾರಿ ೪೮.೨೯ ಇಂಚು ಹೆಚ್ಚಳವಾಗಿದೆ.
ಪೊನ್ನಂಪೇಟೆ ತಾಲೂಕಿನಲ್ಲೂ ಈ ವರ್ಷ ೪೮.೬೩ ಇಂಚು ಅಧಿಕ ಮಳೆ ಸುರಿದಿದೆ. ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ೪೧.೨೦ ಇಂಚು ಮಳೆಯಾಗಿದ್ದರೆ ಈ ವರ್ಷ ೮೯.೮೩ ಇಂಚು ದಾಖಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕೂಡ ಪ್ರಸಕ್ತ ವರ್ಷ ೫೩.೪೭ ಇಂಚುಗಳಷ್ಟು ಹೆಚ್ಚಿನ ಮಳೆಯಾಗಿದೆ. ಸೋಮವಾರ ಪೇಟೆ ತಾಲೂಕಿನಲ್ಲಿ ಈ ಬಾರಿ ೧೦೮.೮೩ ಇಂಚು ಮಳೆಯಾಗಿದ್ದರೆ. ಕಳೆದ ವರ್ಷ ೫೫.೩೬ ಇಂಚು ಮಳೆಯಾಗಿದೆ.
ಕುಶಾಲನಗರ ತಾಲೂಕಿನಲ್ಲಿ ಈ ಬಾರಿ ೫೮.೮೪ ಇಂಚು ಮಳೆಯಾಗಿದೆ. ಕಳೆದ ವರ್ಷ ೩೨.೦೯ ಇಂಚಾಗಿದ್ದು, ಈ ವರ್ಷ ೨೬.೭೫ ಇಂಚು ಮಳೆ ಅಧಿಕವಾಗಿದೆ.