ಮಡಿಕೇರಿ, ಆ. ೨೦: ಆಗಸ್ಟ್ ೨೭ರಿಂದ ೩೧ರವರೆಗೆ ದಕ್ಷಿಣ ಅಮೇರಿಕಾದ ಪೆರುವಿನಲ್ಲಿ ಜರುಗಲಿರುವ ವಿಶ್ವ ಯೂತ್ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಕೊಡಗಿನ ಯುವ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಇಂದು ಪೆರುವಿಗೆ ತೆರಳಿದ್ದಾರೆ.

ಉನ್ನತಿ ಸೇರಿದಂತೆ ರಾಜ್ಯದ ೬ ಮಂದಿ ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ೧೦೦ ಮತ್ತು ೨೦೦ ಮೀಟರ್ ಹರ್ಡಲ್ಸ್ನಲ್ಲಿ ಉನ್ನತಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ರಾಷ್ಟಿçÃಯ ಅಥ್ಲೆಟಿಕ್ ತರಬೇತುದಾರ ಬೊಳ್ಳಂಡ ಅಯ್ಯಪ್ಪ ಹಾಗೂ ಮಾಜಿ ಒಲಂಪಿಯನ್ ಪ್ರಮೀಳಾ ಅಯ್ಯಪ್ಪ ಅವರ ಪುತ್ರಿಯಾದ ಉನ್ನತಿ ಈ ಹಿಂದೆ ನಡೆದ ರಾಷ್ಟಿçÃಯ ಹಿರಿಯ ಮಹಿಳಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ೧೮ನೇ ವಯಸ್ಸಿನಲ್ಲಿ ಸ್ಪರ್ಧಿಸಿ ಚಿನ್ನದ ಪದಕದ ಸಾಧನೆಯೊಂದಿಗೆ ವಿಶ್ವ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದು ಸಾಧನೆ ತೋರಿದ್ದರು.