ಶ್ರೀಮಂಗಲ, ಆ. ೨೦: ಪೊನ್ನಂಪೇಟೆ ತಾಲೂಕು ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನದ ಹೊಸ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚೋನಿರ ಸುಬ್ರಮಣಿ, ಕಾರ್ಯದರ್ಶಿಯಾಗಿ ಬಲ್ಯಮೀದೇರಿರ ಸಂಪತ್, ಉಪಾಧ್ಯಕ್ಷರಾಗಿ ಕಾಯಪಂಡ ಸ್ಟಾಲಿನ್ ಗಣಪತಿ, ಖಜಾಂಚಿಯಾಗಿ ಬಲ್ಯಮೀದೇರಿರ ಚೇತನ್ ಸೋಮಣ್ಣ ಆಯ್ಕೆಗೊಂಡಿದ್ದಾರೆ. ನಿರ್ದೇಶಕರಾಗಿ ಬಲ್ಯಮೀದೇರಿರ ರನ್ನು, ಕಾಯಪಂಡ ಸುನಿಲ್ ಚಂಗಪ್ಪ, ಕಾಯಪಂಡ ಸುರೇಂದ್ರ, ಕಾಯಪಂಡ ಕಾವೇರಪ್ಪ, ಅಮ್ಮತ್ತಿರ ಪರಮೇಶ್ವರ್, ಮಲ್ಲೇಂಗಡ ನರೇಂದ್ರ, ಅಣ್ಣೀರ ಮಂಜುನಾಥ್, ಮೀದೇರಿರ ಗಣಪತಿ, ಅಣ್ಣೀರ ಲೋಕೇಶ್ ಅವರು ಆಯ್ಕೆಯಾಗಿದ್ದಾರೆ.