ಮಡಿಕೇರಿ, ಆ. ೧೯: ಕೇರಳದ ತ್ರಿವಂದ್ರAನಲ್ಲಿ ಆಯೋಜಿತ ಸ್ಟೀಫನ್ ಕೋಶಿ ಜಾಕಬ್ ಮೆಮೋರಿಯಲ್ ಇಂಟರ್‌ನ್ಯಾಷನಲ್ ಮಾಸ್ಟರ್ರ್ ಬಾಸ್ಕೆಟ್ ಬಾಲ್ ಟೂರ್ನಮೆಂಟ್‌ನಲ್ಲಿ ಕೊಡಗಿನ ‘ಇಂಡಿಯಾ ವಾರಿಯರ್ಸ್’ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ೫೦ ಹಾಗೂ ೫೫ ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಬಾಸ್ಕೆಟ್‌ಬಾಲ್ ಪಂದ್ಯಾಟ ಆಯೋಜಿಸಲಾಗಿತ್ತು.

ಕ್ರೀಡಾಕೂಟದಲ್ಲಿ ಅಂರ‍್ರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಮಂಡೇಪAಡ ಪುಷ್ಪ ಕುಟ್ಟಣ್ಣ ಅವರ ನೇತೃತ್ವದ ಕೊಡಗಿನ ಇಂಡಿಯಾ ವಾರಿಯರ್ಸ್ ತಂಡ ಎರಡು ವರ್ಗದಲ್ಲೂ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿಯ ಪದಕವನ್ನು ತನ್ನದಾಗಿಸಿಕೊಂಡಿತು.

ಅAರ‍್ರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರರಾದ ಕಾಡ್ಯಮಾಡ ದೇಚಮ್ಮ, ಕಲಿಯಂಡ ರೇಷ್ಮಾ ಚಂಗಪ್ಪ, ರಾಜ್ಯ ಆಟಗಾರರಾದ ಪಳಂಗAಡ ವಾಣಿ, ತಾತಂಡ ಜ್ಯೋತಿ, ಬಲ್ಯಮೀದೇರಿರ ಆಶಾ, ಕೊಳ್ಳಿಮಾಡ ರಶ್ಮಿ, ಪೊನ್ನಚಂಡ ಸಬಿತ, ಗುಣಶೀಲ ಅಮರ್‌ನಾಥ್, ಮೇಕೇರಿರ ಶರ್ಮಿಳಾ, ಕಾಂಡೇರ ಜಲಜ, ಕೋದೇಂಗಡ ರೇಷ್ಮ ಅವರುಗಳು ಇಂಡಿಯಾ ವಾರಿಯರ್ಸ್ ತಂಡದ ಪರ ಪ್ರದರ್ಶನ ತೋರಿದರು.