ಗೋಣಿಕೊಪ್ಪಲು, ಆ.೨೦: ಮೈಸೂರಿನಿಂದ ಶ್ರೀಮಂಗಲಕ್ಕೆ ರಸಗೊಬ್ಬರ ಹೊತ್ತು ಬರುತ್ತಿದ್ದ ಲಾರಿಯ ಟೈಯರ್ ಏಕಾಏಕಿ ಸ್ಪೋಟಗೊಂಡು ರಸ್ತೆ ಬದಿಗೆ ಮಗುಚಿಗೊಂಡ ಘಟನೆ ದ.ಕೊಡಗಿನ ಹುದಿಕೇರಿ ಬಳಿ ನಡೆದಿದೆ.

ಹುದಿಕೇರಿ ಸಮೀಪ ೭ನೇ ಮೈಲಿ ಬಳಿಯಲ್ಲಿ ಲಾರಿಯು ಮಗಚಿಕೊಂಡಿದ್ದು ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಿಂದ ರಸಗೊಬ್ಬರ ತುಂಬಿಸಿಕೊAಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಲಾರಿಯ ಎರಡು ಟೈಯರ್ ಸ್ಫೋಟದಿಂದ ನಿಯಂತ್ರಣ ತಪ್ಪಿದ ಲಾರಿಯು ರಸ್ತೆಯ ಎಡ ಬದಿಗೆ ಮಗುಚಿ ಕೊಂಡಿದೆ.

ಬಲ ಬದಿಗೆ ಲಾರಿ ಮಗಚಿಕೊಂಡಿದ್ದರೆ ದೊಡ್ಡ ಹಳ್ಳಕ್ಕೆ ಬಿದ್ದು ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆಯಿತ್ತು. ಘಟನೆ ವೇಳೆ ಸ್ಥಳೀಯ ನಾಗರಿಕರು ಲಾರಿಯ ಚಾಲಕ ಹಾಗೂ ಕ್ಲೀನರ್‌ಗೆ ಅಗತ್ಯ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. - ಹೆಚ್.ಕೆ.ಜಗದೀಶ್