ಬೆಂಗಳೂರು ಆ. ೧೯: ಗ್ರಾಹಕರಿಗೆ ತೊಂದರೆಯಾದ ಕುರಿತ ಪ್ರತ್ಯೇಕ ಎರಡು ಅರ್ಜಿಗಳನ್ನು ವಿಚಾರಿಸಿದ ಜಿಲ್ಲಾ ಗ್ರಾಹಕರ ಆಯೋಗ ತೀರ್ಪು ಪ್ರಕಟಿಸಿದೆ.

ಚೆಟ್ಟಳ್ಳಿ ನಿವಾಸಿ ಬಿ.ಬಿ. ಮಾದಯ್ಯ ಅವರು ವರ್ಲ್ಪೂಲ್ ಸಂಸ್ಥೆಯ ರೆಫ್ರಿಜರೇಟರ್ ಖರೀದಿ ಮಾಡಿದ್ದರು. ಇದಕ್ಕೆ ಹತ್ತು ವರ್ಷಗಳ ವಾರಂಟಿ ಕೂಡ ಇದ್ದು, ೫ ವರ್ಷಗಳಲ್ಲಿ ಕೂಲಿಂಗ್ ಸಿಸ್ಟಂ ಹಾಳಾಗಿತ್ತು. ಮಾದಯ್ಯ ಅವರು ಹಲವು ಬಾರಿ ಸರಿಪಡಿಸಿದರೂ ಮತ್ತೇ ಹಾಳಾಗುತಿತ್ತು. ಈ ಬಗ್ಗೆ ವಿಚಾರಿಸಿದಾಗ ಬಿಡಿಭಾಗಗಳು ಲಭ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ. ಈ ಕುರಿತು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಆಯೋಗದ ಅಧ್ಯಕ್ಷೆ ಸಿ. ರೇಣುಕಾಂಭ, ಸದಸ್ಯೆ ಗೌರಮ್ಮಣ್ಣಿ ಅರ್ಜಿ ಪರಿಶೀಲಿಸಿ ವಾರಂಟಿ ಇರುವ ರೆಫ್ರಜಿರೇಟರ್ ಕೆಟ್ಟು ಹೋದರೆ ಅದರ ಬಿಡಿ ಭಾಗಗಳನ್ನು ಸರಬರಾಜು ಮಾಡಲು ಕಂಪನಿ ಬದ್ಧವಾಗಿರಬೇಕೆಂದು ತಿಳಿಸಿ ಕಂಪನಿಯವರು ಮಾದಯ್ಯ ಅವರಿಗೆ ರೂ. ೧೬,೭೮೦ ಹಣ ನೀಡಿ ಹಳೇ ರೆಫ್ರಜಿರೇಟರ್ ವಾಪಾಸ್ ಪಡೆದುಕೊಳ್ಳಬೇಕು. ರೂ. ೫ ಸಾವಿರ ಖರ್ಚು ವೆಚ್ಚಕ್ಕಾಗಿ ಹಾಗೂ ರೂ. ೨೦ ಸಾವಿರ ಗ್ರಾಹಕರ ಕಾನೂನು ಕಲ್ಯಾಣ ನಿಧಿಗೆ ಜಮಾ ಮಾಡಬೇಕೆಂದು ಆದೇಶಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಡಿಕೇರಿ ನಗರದ ವಿನೋದ್ ಕುಮಾರ್ ಅವರ ಅಲ್ಟೋ ಕಾರ್‌ಗೆ ಎಸ್‌ಬಿಐ ವಿಮೆ ಕಂಪನೆಯಲ್ಲಿ ವಿಮೆ ಮಾಡಿಸಿದ್ದು, ಕಾರು ಅಪಘಾತವಾದ ನಂತರ ರಿಪೇರಿ ಖರ್ಚು ರೂ. ೧,೪೪,೮೨೫ ಆಗಿದ್ದು, ಇದನ್ನು ಕ್ಲೆöÊಮ್ ಮಾಡಲು ಹೋದಾಗ ಕಂಪನಿ ತಿರಸ್ಕರಿಸಿದೆ. ಇದನ್ನು ಪ್ರಶ್ನಿಸಿ ಆಯೋಗಕ್ಕೆ ವಿನೋದ್ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಸಿ. ರೇಣುಕಾಂಭ, ಸದಸ್ಯೆ ಗೌರಮ್ಮಣ್ಣಿ ದೂರನ್ನು ಭಾಗಶಃ ಪುರಸ್ಕರಿಸಿ ಸರ್ವೆ ವರದಿ ಪ್ರಕಾರ ಕಾರಿನ ರಿಪೇರಿಗೆ ತಗಲುವ ರೂ. ೧,೦೫,೦೬೫ ಹಾಗೂ ರೂ. ೩೦ ಸಾವಿರ ಮಾನಸಿಕ ವೇದನೆÀಗೆ ದೂರುದಾರರಿಗೆ ಪರಿಹಾರವಾಗಿ ಪಾವತಿಸಲು ಆದೇಶಿಸಿದ್ದಾರೆ.