ಕುಶಾಲನಗರ, ಆ. ೧೯: ಕುಶಾಲನಗರ ಪಟ್ಟಣ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಬೇಕಾಗಿದ್ದ ಚುನಾವಣೆ ರಾಜ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆಯಿಂದ ಮುಂದೂಡಲ್ಪಟ್ಟಿದೆ.

ಕುಶಾಲನಗರ ತಾಲೂಕಿನ ಮುಳ್ಳುಸೋಗೆ ಗ್ರಾಮದ ನಿವಾಸಿ ಎಂ ಎಸ್ ಶಿವಾನಂದ ಎಂಬವರು ಹೈಕೋರ್ಟ್ ನಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಕುಶಾಲನಗರ ಪುರಸಭೆ ಹೆಸರಿನಲ್ಲಿ ಅನ್ಯಾಯ ಉಂಟಾಗಿದೆ ಎಂದು ರಿಟ್ ಪಿಟಿಷನ್ ಸಲ್ಲಿಸಿದ ಮೇರೆಗೆ ಕೋರ್ಟ್ ಚುನಾವಣಾ ಪ್ರಕ್ರಿಯೆಗೆ ತಡೆ ನೀಡಿದೆ. ಕುಶಾಲನಗರ ಪ.ಪಂ.ನಿAದ ಪುರಸಭೆ ಮೇಲ್ದರ್ಜೆಗೇರಿದರೂ ಪ.ಪಂ. ಚುನಾವಣೆ ಎಂದು ನಿಗದಿ ಮಾಡಿದ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋದರು.

ಉಚ್ಚ ನ್ಯಾಯಾಲಯದ ಅಡ್ವಕೇಟ್ ಜನರಲ್ ಕಚೇರಿಯಿಂದ ಸರಕಾರ, ಕೊಡಗು ಜಿಲ್ಲಾಧಿಕಾರಿ, ಮಡಿಕೇರಿ ಉಪವಿಭಾಗಾಧಿಕಾರಿ ಮತ್ತು ಚುನಾವಣಾ ಅಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್ ಅವರಿಗೆ ದೊರೆತ ಆದೇಶದಂತೆ ಸೋಮವಾರ ನಡೆಸಲು ಉದ್ದೇಶಿಸಲಾಗಿದ್ದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಮುಂದೂಡಲ್ಪಟ್ಟಿದೆ.

ಈ ಬಗ್ಗೆ ಚುನಾವಣಾಧಿಕಾರಿ ಹಾಗೂ ತಾಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಅವರು ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು ಮುಂದಿನ ಪ್ರಕ್ರಿಯೆಯನ್ನು ತಿಳಿಸಲಾಗುವುದು ಎಂದು ಘೋಷಿಸಿದರು.

ಆಗಸ್ಟ್ ೮ರಂದು ನೀಡಿದ ಅಧಿಸೂಚನೆಯಂತೆ ಸೋಮವಾರ ಕುಶಾಲನಗರ ಪಟ್ಟಣ ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ

(ಮೊದಲ ಪುಟದಿಂದ) ಮೀಸಲಾಗಿದ್ದು ಬಿಜೆಪಿಯ ರೂಪ ಉಮಾ ಶಂಕರ್, ಕಾಂಗ್ರೆಸ್ಸಿನ ಜಯಲಕ್ಷಿö್ಮ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು ಬಿಜೆಪಿಯಿಂದ ಜಯವರ್ಧನ್ ಮತ್ತು ಕಾಂಗ್ರೆಸ್‌ನಿAದ ಪುಟ್ಟ ಲಕ್ಷö್ಮಮ್ಮ ಅವರುಗಳು ನಾಮಪತ್ರ ಸಲ್ಲಿಸಿದ್ದರು.

ಚುನಾವಣಾ ಪ್ರಕ್ರಿಯೆಯಂತೆ ಮಧ್ಯಾಹ್ನ ೧ ಗಂಟೆಗೆ ಬಿಜೆಪಿ ಬೆಂಬಲಿತ ಆರು ಸದಸ್ಯರು ಮತ್ತು ಕಾಂಗ್ರೆಸ್ ಪರ ಆರು ಮತ್ತು ಜೆಡಿಎಸ್ ಪಕ್ಷದ ನಾಲ್ಕು ಮಂದಿ ಸಭಾಂಗಣಕ್ಕೆ ಬಂದು ಚುನಾವಣೆಗೆ ಸಿದ್ಧರಾದ ಸಂದರ್ಭ ಚುನಾವಣಾಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಚುನಾವಣೆಯನ್ನು ಮುಂದೂಡಲಾಗಿದೆ ಎಂದು ಘೋಷಣೆ ಮಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಕರಾರಿನಂತೆ ಜೆಡಿಎಸ್ ಪಕ್ಷದ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವಂತೆ ಪಕ್ಷದ ಪ್ರಮುಖರು ವಿಫ್ ಜಾರಿಗೊಳಿಸಿದರೂ, ಇದನ್ನು ಉಲ್ಲಂಘಿಸಿ ಜೆಡಿಎಸ್‌ನ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಸಿದ್ದರಾಗಿ ಬಂದ ದೃಶ್ಯ ಸಭಾಂಗಣದಲ್ಲಿ ಕಂಡು ಬಂತು. ಕ್ಷೇತ್ರದ ಶಾಸಕರು ಕೂಡ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದರು. ಆದರೆ ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಅವರ ಗೈರು ಹಾಜರಿ ಗೋಚರಿಸಿತು.