ಕುಶಾಲನಗರ, ಆ. ೨೦: ಕರ್ನಾಟಕ ರೈತ ಸಂಘ ಕುಶಾಲನಗರ ಸಮಿತಿಯ ಆಶ್ರಯದಲ್ಲಿ ಕುಶಾಲನಗರ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊAಡು ಪ್ರತಿಭಟನೆ ನಡೆಯಿತು. ತಾಲೂಕಿನಲ್ಲಿ ಬಾಕಿ ಇರುವ ದಲಿತರ ಬಡವರ ಅಕ್ರಮ ಸಕ್ರಮ ಫಾರಂ ನಂ. ೫೭-೯೪ಸಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಬಡವರ ತುಂಡುಭೂಮಿಯನ್ನು ಪೈಸಾರಿ ಎಂದು ಆರ್.ಟಿ.ಸಿ.ಗೆ ಸೇರಿಸುವುದನ್ನು ರದ್ದುಗೊಳಿಸಬೇಕು. ಭುವನಗಿರಿ ಮತ್ತು ಸೀಗೆ ಹೊಸೂರು ಸರ್ವೆ ನಂ.೩೫ ಮತ್ತು ೨/೧೦ರ ದಲಿತರ ಭೂಮಿಯ ಮೇಲೆ ಉಳ್ಳವರಿಗೆ ರಸ್ತೆ ಬಿಡಿಸಿಕೊಡುವುದನ್ನು ಕೈಬಿಡಬೇಕು.

ಸರ್ಕಾರಿ ಭೂಮಿಯನ್ನು ಉಳ್ಳವರು ಅಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಜೆ. ಪ್ರಕಾಶ್, ಕುಶಾಲನಗರ ತಾಲೂಕು ಅಧ್ಯಕ್ಷ ಮುತ್ತಣ್ಣ, ಜವರಯ್ಯ, ಮತ್ತಿತರರು ಇದ್ದರು.