ಮಡಿಕೇರಿ, ಆ. ೧೯: ಮೈಸೂರು ಮುಡಾ ನಿವೇಶನ ಹಗರಣಕ್ಕೆ ಸಂAಧಿಸಿದAತೆ ಕರ್ನಾಟಕ ರಾಜ್ಯದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ವಜಾಗೊಳಿಸುವಂತೆ ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಪ್ರತಿಟನೆ ನಡೆಸಲಾಯಿತು.
ಗಣಪತಿ ಬೀದಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಜಮಾಯಿಸಿದ ೫೦೦ಕ್ಕೂ ಅಧಿಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ತೆರಳಿ ಜ. ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚನೆ ಮಾಡಿದರು. ಈ ಸಂರ್ದದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ; ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರದ್ದು ಯಾವದೇ ಪಾತ್ರವಿಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿ ಇದರಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲ, ಅಲ್ಲದೆ ಸಂವಿಧಾನದ ಪ್ರಕಾರ ಸಂಪುಟ ಸಭೆಯ ತೀರ್ಮಾನವನ್ನೂ ಕೂಡ ಪರಿಗಣಿಸಬೇಕಾಗುತ್ತದೆ ಎಂಬದನ್ನು ರಾಜ್ಯಪಾಲರು ಹಾಗೂ ರಾಷ್ಟçಪತಿಗಳಿಗೂ ದಾಖಲೆಗಳ ಸಹಿತ ನೀಡಲಾಗಿದೆ. ಆದರೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ಜನಮನ್ನಣೆ ಗಳಿಸಿರುವ ಮುಖ್ಯಮಂತ್ರಿಗಳನ್ನು ಧೃತಿಗೆಡಿಸುವ ಸಲುವಾಗಿ ಬಿಜೆಪಿ ಹಾಗೂ ಜೆಡಿಎಸ್ ಸೇರಿಕೊಂಡು ಮಾಡುತ್ತಿರುವ ಷಡ್ಯಂತ್ರ ವಾಗಿದೆ ಎಂದು ಆರೋಪಿಸಿದರು. ಯಾರೋ ಖಾಸಗಿ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ರಾಜ್ಯಪಾಲರು ತನಿಖೆಗೆ ಆದೇಶ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಈ ನಿಟ್ಟಿನಲ್ಲಿ
(ಮೊದಲ ಪುಟದಿಂದ) ಕಾನೂನು ಹೋರಾಟ ನಡೆಯುತ್ತಿದ್ದು, ಸಚಿವರುಗಳು, ಶಾಸಕರು, ಕಾಂಗ್ರೆಸ್ ಕಾರ್ಯಕರ್ತರು ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದ್ದಾರೆ. ಯಾವದೇ ಕಾರಣಕ್ಕೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವದಿಲ್ಲ ಎಂದು ಪ್ರತಿಪಾದಿಸಿದರು. ಹಾಗಾಗಿ ಕೇಂದ್ರ ಸರಕಾರ ರಾಜ್ಯಪಾಲರನ್ನು ವಜಾಗೊಳಿಸಿ ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಲ್ಲಿ ಪ್ರತಿಭಟನೆ ಮುಂದುವರಿಸಿದರು. ಈ ಸಂದರ್ಭ ಕೆಪಿಸಿಸಿ ಮಾಧ್ಯಮ ಸಂಹವನ ವಕ್ತಾರ ಟಿ.ಪಿ.ರಮೇಶ್ ಮಾತನಾಡಿ; ಮುಖ್ಯಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಹಾಗೂ ಜೆಡಿಎಸ್ ಕುತಂತ್ರ ಮಾಡುತ್ತಿವೆ. ಮುಖ್ಯಮಂತ್ರಿಗಳು ಯಾವದೇ ಅಪರಾಧ ಮಾಡಿಲ್ಲ, ಕೇಂದ್ರದ ಮೋದಿ ಸರಕಾರವನ್ನು ಅಲುಗಾಡಿಸುವ ಧೈರ್ಯವಿರುವ ಏಕೈಕ ಮುಖ್ಯಮಂತ್ರಿ ಅದು ಸಿದ್ಧರಾಮಯ್ಯ ಅವರು. ಅಲ್ಲದೆ ಕಳೆದ ಬಾರಿಯ ಆಡಳಿತದಲ್ಲಿ ಕಮಿಷನ್ ಲೆಕ್ಕದಲ್ಲಿ ಬಿಜೆಪಿಯ ಹಲವು ನಾಯಕರುಗಳು ಹಗರಣ ಮಾಡಿದ್ದು, ಸಿದ್ಧರಾಮಯ್ಯ ಅವರಿದ್ದರೆ ಅವರುಗಳ ಹಗರಣ ಬಯಲಾಗಲಿದೆ ಎಂಬ ಹೆದರಿಕೆಯಿಂದ ರಾಜಭವನವನ್ನು ದುರುಪಯೋಗಪಡಿಸಿಕೊಂಡು ಈ ರೀತಿಯ ಆರೋಪ ಹೊರಿಸಿ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನು ಕಿತ್ತೊಗೆಯಲು ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯದ ದೀನ ದಲಿತರ, ಬಡವರ ಪಾಲಿನ ಆಶಾಕಿರಣವಾಗಿರುವ ಸಿದ್ದರಾಮಯ್ಯ ಅವರನ್ನು ಕಳೆದುಕೊಳ್ಳಲು ರಾಜ್ಯದ ಜನರು ತಯಾರಿಲ್ಲ, ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲುವದರೊಂದಿಗೆ ಒಟ್ಟಾಗಿ ಅವರ ನಾಯಕತ್ವಕ್ಕೆ ಜೀವ ತುಂಬಬೇಕೆAದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ ಮಾತನಾಡಿ; ಇಂತಹ ಕೆಟ್ಟ ರಾಜ್ಯಪಾಲರನ್ನು ಇದುವರೆಗೆ ನೋಡಿಲ್ಲ, ರಾಜ್ಯಪಾಲರನ್ನು ಕಿತ್ತೊಗೆಯಬೇಕು, ಜೆಡಿಎಸ್ ಹಾಗೂ ಬಿಜೆಪಿಗೆ ಧಿಕ್ಕಾರವಿದ್ದು, ಎಲ್ಲರೂ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದ್ದೇವೆ. ಸಚಿವ ಸಂಪುಟ ಕೂಡ ಬೆಂಬಲಕ್ಕೆ ನಿಂತಿದೆ. ಯಾವದೇ ಕಾರಣಕ್ಕೂ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬಾರದೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕಾಂಗ್ರೆಸ್ ಪಕ್ಷದ ಪ್ರಮುಖರುಗಳಾದ ಬೇಕಲ್ ರಮಾನಾಥ್, ಕೊಲ್ಯದ ಗಿರೀಶ್, ಮುನೀರ್ ಅಹ್ಮದ್, ತೆನ್ನೀರ ಮೈನಾ, ಜಯಂತಿಶೆಟ್ಟಿ, ಹಂಸ, ಮನು ಮುದ್ದಪ್ಪ, ರಾಜೇಶ್ ಯಲ್ಲಪ್ಪ, ನಂದಕುಮಾರ್, ಮಂಡಿರ ಸದಾ ಮುದ್ದಪ್ಪ, ನೆರವಂಡ ಉಮೇಶ್, ಬಿದ್ದಾಟಂಡ ತಮ್ಮಯ್ಯ, ಹೊಸೂರು ಸೂರಜ್, ಆರ್. ಪಿ. ಚಂದ್ರಶೇಖರ್, ಪಪ್ಪು ತಿಮ್ಮಯ್ಯ, ಯಶ್ ದೋಲ್ಪಾಡಿ, ಕವನ್ ಕೊತ್ತೋಳಿ, ಯಾಕೂಬ್, ಎಂ.ಎ.ಉಸ್ಮಾನ್, ಕುಲ್ಲಚಂಡ ಪ್ರಮೋದ್ ಗಣಪತಿ, ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.