ವೀರಾಜಪೇಟೆ, ಆ. ೧೮: ತಾಲೂಕು ಕೇಂದ್ರವಾದ ವೀರಾಜ ಪೇಟೆ ಪಟ್ಟಣದಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರಿದ್ದು ದಿನನಿತ್ಯ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಒಂದು ಸಾವಿರಕ್ಕೂ ಅಧಿಕ ವಾಹನಗಳು ಪಟ್ಟದಲ್ಲಿ ಚಲಿಸುತ್ತಿವೆ. ರಸ್ತೆ ವಿಸ್ತರಣೆ ಆಗದೆ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳುತ್ತಿ ರುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪಟ್ಟಣದ ಬಹುತೇಕ ರಸ್ತೆಗಳು ಕಿರಿದಾಗಿದೆ. ಪ್ರವಾಸಿಗರ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆಗಳು ಹೆಚ್ಚಾಗುತ್ತಿದೆ. ಕೇರಳ ರಾಜ್ಯದ ಮಟ್ಟನೂರಿನಲ್ಲಿ ಅಂತರ ರಾಷ್ಟಿçÃಯ ವಿಮಾನ ನಿಲ್ದಾಣ ಇರುವ ಕಾರಣ ಮಂಗಳೂರು, ಹಾಸನ ಮಡಿಕೇರಿ ಸೇರಿದಂತೆ ಹಲವಾರು ಕಡೆಗಳಿಗೆ ತೆರಳಲು ಇದೇ ಮಾರ್ಗವನ್ನು ಬಳಸಬೇಕಾಗಿದೆ.

ಪಟ್ಟಣದಲ್ಲಿ ರಸ್ತೆ ಅಗಲೀಕರಣ ವಾಗದ ಕಾರಣ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ವಾಹನ ಸಂಚಾರ ವನ್ನು ನಿಯಂತ್ರಣ ಗೊಳಿಸುವಲ್ಲಿ ಪೊಲೀಸರು ಪ್ರಯತ್ನಿಸುತ್ತಿದ್ದರು ವಿಫಲರಾಗುತ್ತಿದ್ದಾರೆ. ಸರ್ಕಾರ ಪೊಲೀಸರಿಗೆ ನೆರವಾಗಲೆಂದು ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಿದೆ. ಆದರೆ ವಾಹನ ಚಾಲಕರು ಗೃಹ ರಕ್ಷಕ ದಳದ ಸಿಬ್ಬಂದಿಗಳ ಮಾತಿಗೆ ಕಿಂಚಿತ್ತು ಮನ್ನಣೆ ನೀಡುತ್ತಿಲ್ಲ. ಪ್ರತಿನಿತ್ಯ ವಾಹನ ಚಾಲಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯುತ್ತಿರುವುದು ನೋಡುಗರಿಗೆ ಒಂದು ಪುಕ್ಕಟೆ ಮನರಂಜನೆಯಾಗಿದೆ.

ನಾಲ್ಕು ಚಕ್ರ ಮತ್ತು ದ್ವಿಚಕ್ರ ವಾಹನಗಳಿಗೆ ಬೇರೆ ಬೇರೆ ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದರೂ ವಾಹನ ಚಾಲಕರು ಆ ನಿಯಮವನ್ನು ಪಾಲಿಸುತ್ತಿಲ್ಲ. ನಾಲ್ಕು ಚಕ್ರ ವಾಹನ ನಿಲುಗಡೆಯಲ್ಲಿ ದ್ವಿ ಚಕ್ರ ಹಾಗೂ ಸರಕು ಸಾಗಾಣೆಯ ವಾಹನಗಳು ನಿಲ್ಲುತ್ತಿರುವುದರಿಂದ ಇತರ ವಾಹನಗಳಿಗೆ ಅಡ್ಡಿ ಉಂಟಾಗುತ್ತಿದೆ. ಆಟೋ ರಿಕ್ಷಾ ಚಾಲಕರು ಬೇರೆಯೆ ನಿಲ್ದಾಣಗಳಿದ್ದರೂ ಕೆಲವು ಆಟೊ ರಿಕ್ಷಾಗಳು ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್‌ನಲ್ಲಿ ನಿಲ್ಲಿಸಿ ತೆರಳುತ್ತಾರೆ. ಇತರ ವಾಹನ ಸವಾರರು ಕೂಡ ಪಾರ್ಕಿಂಗ್ ನಿಯಮ ಅನುಸರಿಸದೆ ಮನಬಂದAತೆ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದಲೂ ಪಾರ್ಕಿಂಗ್ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.

ಅಂಗಡಿ ಮಾಲೀಕರು ತಮ್ಮ ವಾಹನಗಳನ್ನು ತಂದು ತಮ್ಮ ಅಂಗಡಿ ಮುಂದೆ ನಿಲ್ಲಿಸಿಕೊಳ್ಳುತ್ತಾರೆ. ಬೆಳಿಗ್ಗೆ ೮ ಗಂಟೆಗೆ ನಿಂತ ವಾಹನ ರಾತ್ರಿ ೮ ಗಂಟೆಯವರೆಗೆ ಅಲ್ಲಿಯೇ ಇರುತ್ತದೆ. ತಾಲೂಕು ಕೇಂದ್ರವಾದ ವೀರಾಜಪೇಟೆ ಪಟ್ಟಣಕ್ಕೆ ಸುತ್ತಮುತ್ತಲ ಗ್ರಾಮಗಳಿಂದ ಬಂದ ವಾಹನಗಳು ಪಾರ್ಕಿಂಗ್‌ಗಾಗಿ ನಗರ ಇಡಿ ಸುತ್ತಾಡುವ ಪರಿಸ್ಥಿತಿ ಎದುರಾಗಿದೆ. ಎಫ್.ಎಂ.ಸಿ ರಸ್ತೆ, ದೊಡ್ಡಟ್ಟಿ ಚೌಕಿಯಿಂದ ಗೋಣಿಕೊಪ್ಪ ರಸ್ತೆ ಮಾಂಸ ಮಾರುಕಟ್ಟೆಯವರೆಗಿನ ಕಾಂಕ್ರೀಟ್ ರಸ್ತೆಯಲ್ಲಿ ವಾಹನ ಮಾಲೀಕರು ವಾಹನಗಳನ್ನು ಪಾರ್ಕ್ ಮಾಡಿ ಬೇರೆ ಬೇರೆ ಊರುಗಳಿಗೆ ತೆರಳುತ್ತಾರೆ. ೩-೪ ದಿನಗಳಾದರು ವಾಹನಗಳನ್ನು ತೆಗೆಯದೆ ಅಲ್ಲಿಯೇ ನಿಲ್ಲಿಸುತ್ತಾರೆ. ಪಟ್ಟಣದ ಎಫ್.ಎಂ.ಸಿ ರಸ್ತೆ ಹೊರತುಪಡಿಸಿ ಉಳಿದ ಎಲ್ಲಾ ರಸ್ತೆಗಳಲ್ಲಿ ದ್ವಿಚಕ್ರ ವಾಹನ ರಿಪೇರಿ ಮಾಡುವ ವರ್ಕ್ಶಾಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಫುಟ್‌ಪಾತ್‌ನಲ್ಲಿಯೆ ವಾಹನಗಳನ್ನು ರೀಪೇರಿ ಮಾಡುವು ದರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತ್ತಿದೆ. ಕಡಿವಾಣ ಹಾಕಬೇಕಾದ ಪುರಸಭೆ ಕಣ್ಣುಮುಚ್ಚಿ ಕುಳಿತುಕೊಂಡಿದೆ.

ಪ್ರವಾಸಿ ಬಸ್‌ಗಳು ಹಾಗೂ ಇತರ ಭಾರೀ ಸರಕು ಸಾಗಾಣಿಕೆಯ ವಾಹನಗಳನ್ನು ನಿಲ್ಲಿಸುತ್ತಿರುವು ದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.

ನೀರಿನ ಟ್ಯಾಂಕರ್‌ಗಳು ಮತ್ತು ಕೆಟ್ಟು ನಿಂತಿರುವ ಸರಕು ಸಾಗಾಣಿಕೆಯ ವಾಹನಗಳಿಂದ ತೊಂದರೆ ಉಂಟಾಗುತ್ತಿದೆ.

ಪಟ್ಟಣದಲ್ಲಿ ಹಲವಾರು ಬಹು ಮಹಡಿ ಕಟ್ಟಡಗಳಿದ್ದು ಮರ‍್ನಾಲ್ಕು ಕಟ್ಟಡಗಳನ್ನು ಹೊರತುಪಡಿಸಿದರೆ ಉಳಿದ ಕಟ್ಟಡಗಳಲ್ಲಿ ನೆಲಮಾಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಮಾಲೀಕರು ಪುರಸಭೆಯಿಂದ ಪರವಾನಗಿ ಪಡೆದುಕೊಳ್ಳುವಾಗ ಸರ್ಕಾರದ ಎಲ್ಲಾ ನಿಬಂಧನೆಗಳಿಗೆ ಒಳಪಡುವಂತೆ ಪರವಾನಗಿ ಪಡೆದು ಕೊಳ್ಳುತ್ತಾರೆ. ಆರಂಭದ ದಿನಗಳಲ್ಲಿ ನೆಲಮಾಳಿಗೆಯನ್ನು ಪಾರ್ಕಿಂಗ್‌ಗೆ ಸೀಮಿತಗೊಳಿಸಿ ನಂತರದ ದಿನಗಳಲ್ಲಿ ಅಂಗಡಿ ಮಳಿಗೆಗಳಾಗಿ ಪರಿವರ್ತಿಸುತ್ತಾರೆ.

ರಸ್ತೆ ವಿಸ್ತರಣೆ ಆಗುವವರೆಗೆ ಅಂಗಡಿ ಮಾಲೀಕರ ವಾಹನ ಹಾಗೂ ದಿನಗಟ್ಟಲೆ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡುವವರಿಗೆ ಇಂತಿಷ್ಟು ಗಂಟೆಗಳೆAದು ಸಮಯ ನಿಗದಿಪಡಿಸಿದರೆ ಸ್ವಲ್ಪಮಟ್ಟಿಗೆ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸ ಬಹುದಾಗಿದೆ.

ಈ ಹಿಂದೆ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್ ಸಬ್ ಇನ್ಸ್ಪೆಕ್ಟರ್ ಪಾರ್ಕಿಂಗ್‌ಗೆ ಸಮಯ ನಿಗದಿಪಡಿಸಿ ಯಶ ಕಂಡಿದ್ದರು. ವಾರಗಟ್ಟಲೆ ವಾಹನ ಪಾರ್ಕ್ಮಾಡಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಿದರೆ ಟ್ರಾಫಿಕ್ ಸಮಸ್ಯೆಯನ್ನು ಸುಮಾರಾಗಿ ಸುಧಾರಿಸಬಹುದು.