ಮಡಿಕೇರಿ, ಆ. ೧೮: ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅಕ್ಟೋಬರ್ ೪ ರಿಂದ ೧೨ರವರೆಗೆ ನಗರದ ಗಾಂಧಿ ಮೈದಾನದಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು, ಕಲಾತಂಡಗಳಿAದ ಅರ್ಜಿ ಆಹ್ವಾನಿಸಲಾಗಿದೆ.

ಕಲಾವಿದರು, ಕಲಾತಂಡಗಳು ಸೆಪ್ಟೆಂಬರ್ ೨ರ ಒಳಗಾಗಿ mಚಿಜiಞeಡಿiಜಚಿsಚಿಡಿಚಿ@gmಚಿiಟ.ಛಿomಗೆ ಅರ್ಜಿ ಮಾಹಿತಿಯನ್ನು ಮೇಲ್ ಮಾಡಬೇಕು. ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.

ಮಹಿಳಾ ದಸರಾ, ಮಕ್ಕಳ ದಸರಾ, ಜಾನಪದ ದಸರಾಗಳಿಗೆ ಕಾರ್ಯಕ್ರಮ ನೀಡುವವರು ಅರ್ಜಿಯಲ್ಲಿ ಈ ಬಗ್ಗೆ ನಮೂದಿಸಬೇಕು. ಒಂದು ಕಲಾತಂಡಕ್ಕೆ ಒಂದು ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸೋಲೋ ನೃತ್ಯ, ಸೋಲೋ ಹಾಡಿಗೆ ಅವಕಾಶವಿಲ್ಲ. ನೃತ್ಯ ತಂಡದಲ್ಲಿ ಕನಿಷ್ಟ ೪ ಮಂದಿ ಇರಬೇಕು, ಕಲಾವಿದರ ಆಯ್ಕೆಯ ಅಂತಿಮ ತೀರ್ಮಾನ ದಸರಾ ಸಾಂಸ್ಕೃತಿಕ ಸಮಿತಿಯದ್ದಾಗಿರುತ್ತದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ ತೆನ್ನೀರಾ ಮೈನಾ - ೯೪೪೯೧ ೫೬೨೧೫, ಕುಡೆಕಲ್ ಸಂತೋಷ್ - ೯೯೭೨೫೩೮೫೮೪.