ಕೂಡಿಗೆ, ಆ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆಯ ನಡಾವಳಿಕೆಯನ್ನು, ಹಿಂದಿನ ಸಭೆಯ ವರದಿಯನ್ನು ಓದಿದ ನಂತರ ಕಳೆದ ಸಭೆಯಲ್ಲಿ ಸದಸ್ಯರು ಚರ್ಚೆ ಮಾಡಿದ ಸವಿಸ್ತಾರವಾದ ವರದಿಯನ್ನು ಮತ್ತು ಒಂದು ತಿಂಗಳಿAದ ಬೀದಿ ದೀಪ ಮತ್ತು ಕೆಲವು ವಾರ್ಡ್ಗಳಲ್ಲಿ ಶುಚಿತ್ವಕ್ಕೆೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ್ಲ ಎಂದು ಉಪಾಧ್ಯಕ್ಷೆ ವಿ. ಜಯಶ್ರೀ ಸೇರಿದಂತೆ ೫ ಮಂದಿ ಸದಸ್ಯರುಗಳಾದ ಅರುಣ್ ರಾವ್, ಅನಂತ, ಶಿವಕುಮಾರ್, ಪಲ್ಲವಿ, ರವಿ ಸಭೆಯಿಂದ ಸಭಾತ್ಯಾಗ ಮಾಡಿದ ಘಟನೆ ನಡೆಯಿತು.

೧೫ ಮಂದಿ ಸದಸ್ಯರನ್ನು ಹೊಂದಿರುವ ಆಡಳಿತ ಮಂಡಳಿಯಲ್ಲಿ ೯ ಮಂದಿ ಸಭೆಯಲ್ಲಿ ಹಾಜರಿದ್ದ ಹಿನ್ನೆಲೆ ಸಭೆಯನ್ನು ನಡೆಸಲಾಯಿತು. ಮಳೆಗಾಲದಲ್ಲಿ ಅನೇಕ ಬೀದಿ ದೀಪಗಳು ದುರಸ್ತಿಗೊಂಡಿರುವ ಹಿನ್ನೆಲೆ ದುರಸ್ತಿ ಸೇರಿದಂತೆ ಶುಚಿತ್ವಕ್ಕೆ ಹೆಚ್ಚಿನ ಸಿಬ್ಬಂದಿಗಳನ್ನು ತೊಡಗಿಕೊಂಡು ಶುಚಿತ್ವದ ಕಡೆಗೆ ಗಮನ ಹರಿಸುವಂತೆ ಹಾಜರಿದ್ದ ಸದಸ್ಯರು ಸಲಹೆಗಳನ್ನು ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕೆ.ಟಿ. ಗಿರೀಶ್ ಮಾತನಾಡಿ, ಮಾಸಿಕ ಸಭೆಯ ತೀರ್ಮಾನದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅಧ್ಯತೆಯನ್ನು ಮತ್ತು ಅತಿಯಾದ ಮಳೆಗಾಲವಾದ ಹಿನ್ನೆಲೆ ಅನೇಕ ಬೀದಿ ದೀಪಗಳು ಹಾಳಾಗಿರುವುದರಿಂದಾಗಿ ಈಗಾಗಲೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಅದರಂತೆಯೇ ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳುವ ಸದಸ್ಯರ ಸಹಕಾರ ಮುಖ್ಯ ಎಂದರು.

ಅಭಿವೃದ್ಧಿ ಅಧಿಕಾರಿ ಮಂಜಳಾ ಸರಕಾರದ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿಯನ್ನು ತಿಳಿಸಿದರು. ಈ ಸಂದರ್ಭ ಟಿ.ಪಿ. ಹಮೀದ್, ಮಂಗಳ, ಮೋಹಿನಿ, ವಾಣಿ, ರತ್ನಮ್ಮ, ಚಂದ್ರು, ಜಯವಾಣಿ, ಲಕ್ಷಿö್ಮ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.