ಮಡಿಕೇರಿ, ಆ. ೧೮: ಬೃಹತ್ ಭೂಪರಿವರ್ತನೆ ಮತ್ತು ಭೂ ವಿಲೇವಾರಿಯಿಂದ ಕೊಡವ ಲ್ಯಾಂಡ್ಗೆ ಅಪಾಯ ಎದುರಾಗಿದ್ದು, ಕಪ್ಪು ಹಣದಿಂದ ನಿರ್ಮಾಣಗೊಂಡಿರುವ ಕೆಲ ರೆಸಾರ್ಟ್, ವಿಲ್ಲಾ, ಟೌನ್ ಶಿಪ್ಗಳನ್ನು ತಕ್ಷಣ ತೆರವುಗೊಳಿಸ ಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಒತ್ತಾಯಿಸಿದ್ದಾರೆ.
ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿ ಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್ಸಿ ವತಿಯಿಂದ ಸುಂಟಿಕೊಪ್ಪದಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಆದಿಮಸಂಜಾತ ಕೊಡವ ಬುಡಕಟ್ಟು ಜನಾಂಗದ ಮಾತೃಭೂಮಿ ಕೊಡವಲ್ಯಾಂಡ್ಗೆ ಸಂಚಕಾರವಾಗಬಲ್ಲ ಬೃಹತ್ ಭೂಪರಿವರ್ತನೆಗೆ ಗುಪ್ತವಾಗಿ ಅನುಮತಿ ನೀಡಲಾಗುತ್ತಿದೆ. ಬೇಲಿಯೇ ಎದ್ದು ಹೊಲವನ್ನು ಮೇಯ್ದಂತೆ ಸರ್ಕಾರವೇ ನೇರವಾಗಿ ಭೂಪರಿವರ್ತನೆಗೆ ಕುಮ್ಮಕ್ಕು ನೀಡುತ್ತಿದೆ. ಸುಂಟಿಕೊಪ್ಪ ವ್ಯಾಪ್ತಿಯ ಖಾಸಗಿ ತೋಟದ ನೂರಾರು ಎಕರೆ ಕೂಡ ಭೂಪರಿವರ್ತನೆಗೆ ಸಿದ್ಧತೆ ನಡೆದಿದೆ.
ಬೃಹತ್ ಮೊತ್ತದ ಲಂಚದ ರೂಪದ ಹಣ ನೀಡುವ ಭೂ ಮಾಫಿಯಾಗಳನ್ನು ಪ್ರೀತಿಯಿಂದ ಕಾಣುವ ಆಡಳಿತ ವರ್ಗ ಮುಗ್ಧ ರೈತರನ್ನು ಹಾಗೂ ಮೂಲ ನಿವಾಸಿಗಳನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಎನ್.ಯು. ನಾಚಪ್ಪ ಆರೋಪಿಸಿದರು.
ಬಂಡವಾಳಶಾಹಿಗಳಿಗೆ ೯೯ ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂ ಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು. ಕೇರಳದ ವಯನಾಡಿನ ದುರಂತ ಕೊಡಗಿನಲ್ಲಿ ಸಂಭವಿಸದAತೆ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಕಾನೂನು ತಿದ್ದುಪಡಿ ತರಬೇಕು. ಕೊಡಗು ಪ್ರದೇಶ ಬೆಟ್ಟ-ಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿದೆ. ಆದ್ದರಿಂದ ಬಯಲು ಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ೭೯ಎ ಮತ್ತು ೭೯ಬಿ ಯನ್ನು ದುರುಪಯೋಗಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೆöÊ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂ ಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಇದು ಪವಿತ್ರ ಕೊಡವ ಲ್ಯಾಂಡ್ನ ನಾಶಕ್ಕೆ ಕಾರಣವಾಗಬಹುದು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂ ರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ನಾಳೆ ಕುಟ್ಟದಲ್ಲಿ ಜಾಗೃತಿ
ಸಿಎನ್ಸಿ ವತಿಯಿಂದ ತಾ.೨೦ ರಂದು ಕುಟ್ಟದಲ್ಲಿ, ತಾ.೨೯ ಮೂರ್ನಾಡು, ಸೆ.೯ ನಾಪೋಕ್ಲು ಹಾಗೂ ಸೆ.೧೦ ರಂದು ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು.
ಜನಜಾಗೃತಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಚೋಳಪಂಡ ಜ್ಯೋತಿ ನಾಣಯ್ಯ, ಚೋಳಪಂಡ ಜಾಜು ಸುರೇಶ್, ಮುಕ್ಕಾಟಿರ ಎ. ವಸಂತ್, ಪುಡಿಯಂಡ ಮುತ್ತಣ್ಣ, ದಾಸಂಡ ಜಯರಾಜ್, ನಂದಿನೆರವAಡ ಅಪ್ಪಯ್ಯ, ಮಾಳೆಯಂಡ ಮುತ್ತಪ್ಪ, ಕಾಯಪಂಡ ತಮ್ಮಯ್ಯ, ಚಿಕ್ಕಂಡ ಉತ್ತಪ್ಪ, ನಾಗಶೆಟ್ಟಿರ ಮನು, ಕೇಚಿರ ಭಾಗೇಶ್, ಕುಲ್ಲಚಂಡ ಆರ್ಯನ್ ಕುಟ್ಟಪ್ಪ, ಕುಲ್ಲಚಂಡ ಕಾರ್ಯಪ್ಪ, ಪುಡಿಯಂಡ ರಂಜಿತ್, ದಾಸಂಡ ವಿಕ್ರಮ್, ನಾಗಶೆಟ್ಟಿರ ಬೊಳ್ಳಿಯಪ್ಪ, ಮೊಳ್ಳೇರ ಸುಬ್ರಮಣಿ, ಮೊಳ್ಳೇರ ಡಾಲು, ಮೊಳ್ಳೇರ ಜಗನ್, ದಾಸಂಡ ಶಿವು ಉತ್ತಪ್ಪ, ಚಿಕ್ಕಂಡ ಪೊನ್ನಪ್ಪ, ಕಂಜಿತAಡ ಅಯ್ಯಣ್ಣ, ನಂದಿನೆರವAಡ ರವಿ ಕುಟ್ಟಪ್ಪ, ನಂದಿನೆರವAಡ ನಂದ, ನಂದಿನೆರವAಡ ಐಯಣ್ಣ, ನಂದಿನೆರವAಡ ವಿಜು, ಪುಟ್ಟಿಚಂಡ ದೇವಯ್ಯ, ನಂದಿನೆರವAಡ ಟಿಪ್ಪು, ನಂದಿನೆರವAಡ ರಾಜೇಶ್, ನಂದಿನೆರವAಡ ಬೋಪಣ್ಣ, ಮೊಳ್ಳೆರ ಕಾವೇರಪ್ಪ, ಮೊಳ್ಳೆರ ಜಗನ್, ಕಲ್ಮಾಡಂಡ ಸುರೇಶ್, ಪಾರುವಂಗಡ ರವಿ, ಕೇಚಿರ ಚೆಂಗಪ್ಪ, ಚೋಳಪಂಡ ನಾಣಯ್ಯ, ದಾಸಂಡ ಕಿರಣ್, ದಾಸಂಡ ಜಗ ಮಾದಪ್ಪ, ದಾಸಂಡ ಮಂದಣ್ಣ, ಬಲ್ಲಾರಂಡ ರಾಜಪ್ಪ, ದಾಸಂಡ ಚೆಂಗಪ್ಪ, ದಾಸಂಡ ಅಚ್ಚಯ್ಯ, ಬೊಟ್ಟೋಳಂಡ ಕುಮಾರ್, ಚೆಪ್ಪುಡಿರ ಪ್ರಿನ್ಸ್, ಚೆಪ್ಪುಡಿರ ಸತೀಶ್, ಪುಲ್ಲೇರ ಹರ್ಷ, ಪಾಲೇಕಂಡ ಅಯ್ಯಪ್ಪ, ಪುಲ್ಲೇರ ಕಾಳಪ್ಪ ಮತ್ತಿತರರು ಪಾಲ್ಗೊಂಡು ಬೃಹತ್ ಭೂ ಪರಿವರ್ತನೆ ಮತ್ತು ಭೂ ವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.