ಕೂಡಿಗೆ, ಆ. ೧೮: ಬೆಂಗಳೂರಿನಲ್ಲಿ ಭಾನುವಾರ ಆರಂಭಗೊAಡ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಪುರುಷರ ಹಾಕಿ ಟೂರ್ನಿಯಲ್ಲಿ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಜಿಲ್ಲಾ ತಂಡವು ಮುನ್ನಡೆ ಸಾಧಿಸಿದೆ.
ಬೆಂಗಳೂರಿನ ಶಾಂತಿನಗರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಕೊಡಗು ಮತ್ತು ವಿಜಯಪುರ ನಡುವೆ ನಡೆದ ಹಾಕಿ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ೭-೦ ಗೋಲುಗಳ ಅಂತರದಲ್ಲಿ ವಿಜಯಪುರ ತಂಡವನ್ನು ಮಣಿಸಿತು.
ಕೊಡಗು ಹಾಕಿ ತಂಡದ ಪರವಾಗಿ ಲೋಕೇಶ್ ಆರ್.ಡಿ ಮತ್ತು ಸತೀಶ್ ತಲಾ ೨ ಗೋಲುಗಳು ಹಾಗೂ ಜಾಗೃತ್, ಮೌನ್ ಮೊಣ್ಣಪ್ಪ ಹಾಗೂ ಮಾಚಯ್ಯ ತಲಾ ಒಂದು ಗೋಲು ದಾಖಲಿಸಿದರು.
ತಂಡದ ವ್ಯವಸ್ಥಾಪಕ ಬಿ.ಟಿ. ಪೂರ್ಣೇಶ್ ನೇತೃತ್ವದಲ್ಲಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಪೊನ್ನಂಪೇಟೆಯ ಡ್ಯಾನಿ ಈರಪ್ಪ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾ.೧೯ ರಂದು ಹಾಕಿಯ ಸೆಮಿಫೈನಲ್ ಮತ್ತು ಅಂತಿಮ ಟೂರ್ನಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಪುರುಷರ ೧೦೦ ಮತ್ತು ೫೦ ಮೀಟರ್ ಫ್ರೀ ಸ್ಟೆöÊಲ್ ಈಜು ಸ್ಪರ್ಧೆಯಲ್ಲಿ ಮಡಿಕೇರಿ ತಾಲೂಕು ನೌಕರರ ಇಲಾಖೆಯ ನೌಕರ ಹರೀಶ್ ಕುಮಾರ್ಗೆ ಪ್ರಥಮ ಸ್ಥಾನ ದೊರಕಿದೆ.
೫೦ ಮೀಟರ್ ಬ್ಯಾಕ್ ಸ್ಟೊçÃಕ್ ಈಜು ಸ್ಪರ್ಧೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಡಿಕೇರಿ ತಾಲೂಕು ಪಂಚಾಯಿತಿ ಸಿಬ್ಬಂದಿ ಹಾಗೂ ಕೊಡಗು ಜಿಲ್ಲಾ ಸರ್ಕಾರಿ ನೌಕರ ಸಂಘದ ನಿರ್ದೇಶಕ ಹುಸೈನಸಾಹೇಬ ಮುಲ್ಲಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.