ಐಗೂರು, ಆ. ೧೮: ಸ.ಹಿ.ಪ್ರಾ. ಶಾಲೆ, ಕಾಜೂರಿನಲ್ಲಿ ೧೪ ವರ್ಷ ಗಣಿತ ಮತ್ತು ವಿಜ್ಞಾನ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ಚಾಮರಾಜನಗರದ ಶಾಲೆಗೆ ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕಿ ಭಾರತಿ ಅವರ ಬೀಳ್ಕೊಡುವ ಸಮಾರಂಭವನ್ನು ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಭಾರತಿ ಅವರು ಮಾತನಾಡಿ ಈ ಶಾಲೆಯಲ್ಲಿ ಸೇವೆ ಸಲ್ಲಿಸಲು ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಹಕರಿಸಿದ್ದನ್ನು ನೆನಪಿಸಿಕೊಂಡರು. ಸಿಆರ್ಪಿ ಗಿರೀಶ್, ಮುಖ್ಯ ಶಿಕ್ಷಕಿ ಸರಳ ಕುಮಾರಿ, ಐಗೂರು ಪ. ಪೂ.ಕಾ. ಪ್ರಾಂಶುಪಾಲ ಉಮೇಶ್, ಮಾಜಿ ಗ್ರಾ.ಪಂ. ಸದಸ್ಯ ಮುತ್ತಪ್ಪ, ಶಿಕ್ಷಕ ವೃಂದ , ಹಾಲಿ ಮತ್ತು ಮಾಜಿ ಎಸ್ಡಿ ಎಂಸಿ ಸದಸ್ಯರು ,ಕಾಜೂರು ಶಾಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.