ನಾಪೋಕ್ಲು, ಆ. ೧೮: ಭಾರತೀಯ ಅರಣ್ಯ ಸೇವೆ ಅಧಿಕಾರಿ ಮೂಲತಃ ಮಡಿಕೇರಿ ತಾಲೂಕು ನಾಪೋಕ್ಲುವಿನ ಪಿ.ಎ. ಸೀಮಾ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಮೊಟ್ಟ ಮೊದಲ ಮಹಿಳಾ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ.
ಸೀಮಾ ಅವರು ಈ ಹಿಂದೆ ಮೈಸೂರು, ಮಂಡ್ಯ ಹುಣಸೂರು, ಮಡಿಕೇರಿಯಲ್ಲಿ ಡಿ.ಸಿ.ಎಫ್. ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಆನೆಗಳ ಕಾರ್ಯಪಡೆಯ ಹೆಚ್ಚುವರಿ ಡಿ.ಸಿ.ಎಫ್. ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮೂಲತಃ ನಾಪೋಕ್ಲು ಗ್ರಾಮದ ನಿವಾಸಿ ಪಾಡ್ಯಮಂಡ ಆನಂದ (ಸಾಬು), ಕಮಲ ದಂಪತಿ ಪುತ್ರಿ, ಮತ್ತೂರು ಗ್ರಾಮದ ಪುತ್ತಾಮನೆ ರಂಜನ್ ಅವರ ಪತ್ನಿ.