ಕಡಂಗ, ಆ. ೧೮: ಸಮೀಪದ ಗುಂಡಿಕೆರೆ ಮದ್ರಸ ಸಭಾಂಗಣದಲ್ಲಿ ಜಮಾಅತ್‌ನ ವಾರ್ಷಿಕ ಮಹಾಸಭೆ ನಡೆಯಿತು. ಗುಂಡಿಗೆರೆ ಶಾಫಿ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ನಿವೃತ್ತ ಯೋಧ ಮೀತಲ್ತಂಡ ಎಸ್. ಉಮ್ಮರ್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಿವೃತ್ತ ಪೊಲೀಸ್ ಆಧಿಕಾರಿ ಹಮೀದ್ ಎಂ.ಎ., ಪ್ರಧಾನ ಕಾರ್ಯದರ್ಶಿಯಾಗಿ ಉಬೈದ್ ಎ.ಇ., ಕಾರ್ಯದರ್ಶಿಯಾಗಿ ಸಲೀಂ ಸಿ.ಎಂ. ಆಯ್ಕೆಯಾದರು ಆಡಳಿತ ಮಂಡಳಿ ಸದಸ್ಯರುಗಳಾಗಿ ಮುಟ್ಟಲ್ ಮೊಯಿದು, ಸಮದ್ ಸಮ್ಮು, ಇಸ್ಮಾಯಿಲ್ ಮುಸ್ಲಿಯಾರ್, ಸಪೀರ್ ಮುಸ್ಲಿಯಾರ್, ಮೊಯಿದು (ಮುತ್ತು), ಸಫಾದ್ ಎಂ.ಕೆ., ರಫೀಕ್, ಎಂ.ಹೆಚ್. ಷಂಶುದ್ದೀನ್ ಮುಂತಾದವರು ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಕೆ.ಯು. ಮುಹಮ್ಮದ್ ಹಾಜಿ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬರಾದ ಇಲ್ಯಾಸ್ ಅಂಜದಿ ಉಸ್ತಾದರು ಪ್ರಾರ್ಥನೆ ನೆರವೇರಿಸಿದರು. ನಿರ್ಗಮಿತ ಕಾರ್ಯದರ್ಶಿ ಸಿ.ಪಿ. ಆಲಿ ಸ್ವಾಗತಿಸಿದರು.