*ಗೋಣಿಕೊಪ್ಪ, ಆ. ೧೮: ಕಾಫಿ ಮಂಡಳಿ ವತಿಯಿಂದ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳೆಗಾರರ ಅನುಕೂಲಕ್ಕೆ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರ ನಡೆಸಲಾಯಿತು. ಬಾಳೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗೊಣಿಕೊಪ್ಪಲು ಕಾಫಿ ಮಂಡಳಿ, ಬಾಳೆಲೆ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕಾರ್ಯಾಗಾರ ನಡೆಯಿತು.
ಪ್ರಸ್ತುತ ವರ್ಷ ಸುರಿದ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕೊಳೆರೋಗ ಮತ್ತು ಕಾಫಿ ಉದುರುವುದರ ಬಗ್ಗೆ, ಮರು ನಾಟಿ, ಗೋಡೌನ್, ಕಾಫಿಕಣ, ನೂತನ ಕೆರೆ, ಬಾವಿ, ಸ್ಪಿಂಕ್ಲರ್ ಉಪಕರಣ, ಮೋಟಾರ್ ಮಿನಿ ಟ್ರಾö್ಯಕ್ಟರ್ ಮುಂತಾದವುಗಳಿಗೆ ಇರುವ ಸಬ್ಸಿಡಿಗಳ ಬಗ್ಗೆ ಗೊಣಿಕೊಪ್ಪಲು ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಮುಖಾರಿಬ್ ಡಿ. ಯಸ್ ಬೆಳೆಗಾರರಿಗೆ ಮಾಹಿತಿ ನೀಡಿದರು.