ಮಡಿಕೇರಿ, ಆ. ೧೭ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜಿಲ್ಲೆಯ ಮತ್ತು ಹೊರಭಾಗದ ಕೊಡವ ಸಾಂಸ್ಕೃತಿಕ ಕಲಾವಿದರುಗಳು ಹಾಗೂ ಕಲಾತಂಡ ಗಳಿಂದ ಅವಕಾಶ ಕಲ್ಪಿಸಲಾಗುವುದು. ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಮ್ಮತ್ತಾಟ್, ಬೊಳಕಾಟ್, ಕೊಂಬಾಟ್, ಕಪ್ಪೆಯಾಟ್, ಚೌರಿಯಾಟ್, ಕೋಲಾಟ್, ಪರೆಯಕಳಿ, ಉರ್ಟಿಕೊಟ್ಟ್ ಆಟ್, ಬಿಲ್ಲಾಟ್, ಪೀಲಿಯಾಟ್, ಕಾಪಳಕಳಿ, ಕತ್ತಿಯಾಟ್, ದುಡಿಕೊಟ್ಟ್ ಪಾಟ್, ಒಯ್ಯ ಪಾಟ್, ಧೋಳ್ಪಾಟ್, ದೇವಡ ಪಾಟ್, ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸೇರಿದಂತೆ ಇತರ ಕಲಾವಿದರುಗಳು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ವಿವರವನ್ನು ಅಕಾಡೆಮಿ ಕಚೇರಿಗೆ ಸೆ. ೩೦ರ ಒಳಗೆ ಲಿಖಿತವಾಗಿ ತಲುಪಿಸಬಹುದು. ನೋಂದಾಯಿತ ತಂಡಗಳಿಗೆ ಹಾಗೂ ಕಲಾವಿದರುಗಳಿಗೆ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳ ಪ್ರದರ್ಶನ ಹಾಗೂ ಸ್ಪರ್ಧೆಯ ಅನಾವರಣಕ್ಕೆ ಆದ್ಯತೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: ೦೮೨೭೨-೨೨೯೦೭೪, ೮೯೭೧೯೫೮೯೯೬ ಸಂಪರ್ಕಿಸುವAತೆ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ರಿಜಿಸ್ಟçರ್ ಅಜ್ಜಿಕುಟ್ಟಿರ ಗಿರೀಶ್ ತಿಳಿಸಿದ್ದಾರೆ.