ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಆ. ೧೬ : ಕೊಡಗಿನ ಕಾಫಿ ಬೆಳೆಗಾರರೊಬ್ಬರಿಗೆ ಹುಸಿ ಕರೆ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಐವರು ಆರೋಪಿಗಳನ್ನು ಬೆಂಗಳೂರಿನ ಸಿಐಡಿ ಸೈಬರ್ ಕ್ರೆöÊಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಂಗಳೂರಿನ ನಿವಾಸಿಗಳಾದ ಮೊಹಮ್ಮದ್ ಶಾಖಬ್, ಮೊಹಮ್ಮದ್ ಆಯಾನ್, ಅಹ್ಸಾನ್ ಅನ್ಸಾರಿ, ಸೋಲೋಮನ್ ರಾಜ ಹಾಗೂ ದುಬೈ ಮೂಲದ ಯೂಸಫ್ ಸೇಠ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಟ್ಟು ರೂ. ೧.೭ ಕೋಟಿ ನಗದು, ೭,೭೦೦ ಅಮೆರಿಕನ್ ಡಾಲರ್ (ಸುಮಾರು ೬.೨೫ ಲಕ್ಷ ರೂಪಾಯಿ) ಹಾಗೂ ವಂಚನೆಯ ಹಣದಲ್ಲಿ ಖರೀದಿಸಿದ್ದ ಒಂದು ಹೊಸ ಬೆನ್ಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ತಿಳಿಸಿದರು. ಈ ಬೆನ್ಸ್ ಕಾರಿನ ಬೆಲೆ ೨೮-೩೦ ಲಕ್ಷ ರೂಪಾಯಿ ಗಳಾಗಿದ್ದು, ಯೂಸಫ್ ಎಂಬಾತ ವಂಚಿಸಿದ್ದ ಹಣದಲ್ಲಿಯೇ ದುಬೈಗೆ ತೆರಳಿದ್ದು, ಇಲ್ಲಿಗೆ ಅವನ ಸಹಚರರಿಂದಲೇ ಕರೆ ಮಾಡಿಸಿ ಬಂಧಿಸಲಾಗಿದೆ ಎಂದು ಹೇಳಿದರು.
ಇದೇ ವರ್ಷದ ಮೇನಲ್ಲಿ ಜಿಲ್ಲೆಯ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಮುತ್ತಣ್ಣ ಎಂಬವರ ಮೊಬೈಲ್ಗೆ ಕರೆ ಮಾಡಿದ್ದ ಆರೋಪಿಗಳು, ಫೆಡೆಕ್ಸ್ ಎಂಬ ಅಂರ್ರಾಷ್ಟಿçÃಯ ಕೊರಿಯರ್ ಕಂಪನಿಯಿAದ ಮಾತ ನಾಡುತ್ತಿರುವುದಾಗಿ ಹೇಳಿ, ‘‘ನಿಮಗೆ ಬಂದಿರುವ ಪಾರ್ಸೆಲ್ನಲ್ಲಿ ಎಂಡಿಎAಎ ಮಾದಕ ಪದಾರ್ಥವಿದೆ. ಈ ಪಾರ್ಸೆಲ್ ಅನ್ನು ನಾರ್ಕೋಟಿಕ್ಸ್ ಪೊಲೀಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ನೀವು ನಾರ್ಕೋಟಿಕ್ಸ್ ಕ್ರೆöÊಂ ವಿಭಾಗದ ಉನ್ನತ
ಪೊಲೀಸ್ ಅಧಿಕಾರಿಯವರೊಂದಿಗೆ ಮಾತನಾಡಬೇಕು’’ ಎಂದಿದ್ದರು.
ಬಳಿಕ ಕ್ರೆöÊಂ ಪೊಲೀಸರೆಂದು ವಾಟ್ಸಾö್ಯಪ್ ಕರೆ ಮೂಲಕ ಸಂಪರ್ಕಿಸಿ, ‘‘ನಿಮ್ಮ ಪಾರ್ಸೆಲ್ನಲ್ಲಿ ಎಂಡಿಎAಎ ಮಾದಕ ವಸ್ತು ಇರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಇದನ್ನು ಇತ್ಯರ್ಥ ಪಡಿಸಿಕೊಳ್ಳಲು ನೀವು ಹಣ ನೀಡ ಬೇಕಾಗುತ್ತದೆ’’
(ಮೊದಲ ಪುಟದಿಂದ) ಎಂದು ಬೆದರಿಸಿದ್ದರು. ಆತಂಕಗೊAಡ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಿಂದ ಆರೋಪಿಗಳು ಹೇಳಿದ ಖಾತೆಗಳಿಗೆ ಒಟ್ಟು ೨.೨೧ ಕೋಟಿ ರೂ. ಹಣವನ್ನು ಆರ್ಟಿಜಿಎಸ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ವಂಚಕರು ಕೆಲವು ದಿನಗಳ ಬಳಿಕ ಮತ್ತೆ ಕರೆ ಮಾಡಿ, ಇನ್ನಿತರೆ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ ಹಣ ವರ್ಗಾಯಿಸುವಂತೆ ಬೆದರಿಸಿದ್ದರು.
ಇದರಿಂದ ಸಂಶಯಗೊAಡ ವ್ಯಕ್ತಿ, ಮಡಿಕೇರಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಂದಿನ ತನಿಖೆಗೆ ಪ್ರಕರಣವನ್ನು ಸಿಐಡಿ ಸೈಬರ್ ಕ್ರೆöÊಂ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಖಾತೆಗಳ ವಿವರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾ ಸಮಯದಲ್ಲಿ ಪ್ರಮುಖ ಆರೋಪಿಗಳು ಇದೇ ರೀತಿ ಅನೇಕ ಜನರಿಗೆ ವಂಚಿಸಿರುವುದೂ ಪತ್ತೆ ಆಗಿದ್ದು ಸೈಬರ್ ವಂಚನೆ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದರು ಎಂದು ಸಲೀಂ ತಿಳಿಸಿದರು. ಆರೋಪಿಗಳು ವಂಚಿಸಿದ ಹಣವನ್ನು ೨೬ ಭಾರತೀಯ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಯಾಗಿರುವುದು ತನಿಖೆ ವೇಳೆ ಪತ್ತೆ ಆಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಹಣ ಸುಲಿಗೆ ಮಾಡಲು ದಿನೇ ದಿನೇ ಹೊಸ ತಂತ್ರಗಳನ್ನು ಕಂಡು ಹಿಡಿಯುತ್ತಿರುವ ವಂಚಕರು ಪೊಲೀಸ್ ಅಧಿಕಾರಿಗಳ ವೇಷ ಹಾಕಿಕೊಂಡೇ ವಾಟ್ಸಾö್ಯಪ್ ವೀಡಿಯೋ ಕರೆ ಮಾಡಿ ಜನರನ್ನು ಬೆದರಿಸುತ್ತಾರೆ. ಇವರು ಸಾಮಾನ್ಯವಾಗಿ ನಿಮ್ಮ ಅಥವಾ ನಿಮ್ಮ ಆತ್ಮೀಯರ ಹೆಸರಿನಲ್ಲಿ ಬಂದಿರುವ ಅಥವಾ ನಿಮ್ಮ ಹೆಸರಿನಲ್ಲಿ ವಿದೇಶಕ್ಕೆ ಕಳಿಸಲಾಗುತ್ತಿರುವ ಪಾರ್ಸೆಲ್ನಲ್ಲಿ ಮಾದಕ ಪದಾರ್ಥ, ನಕಲಿ ಪಾಸ್ಪೋರ್ಟ್ಗಳು ಮತ್ತಿತರ ವಸ್ತುಗಳಿವೆ ಎಂದು ಮೊದಲು ಬೆದರಿಸುತ್ತಾರೆ. ಅಷ್ಟೇ ಅಲ್ಲ ಇವರು ತಮ್ಮ ವಂಚನ ಸ್ಥಳಗಳಲ್ಲಿಯೇ ನಕಲಿ ಸರ್ಕಾರಿ ಕಚೇರಿ, ಪೊಲೀಸ್ ಠಾಣೆ, ಲಾಕ್ ಅಪ್ ಎಲ್ಲವನ್ನೂ ಸೃಷ್ಟಿ ಮಾಡಿರುತ್ತಾರೆ. ವೀಡಿಯೋ ಕರೆ ಮಾಡಿದಾಗ ಇದೆಲ್ಲವನ್ನೂ ತೋರಿಸಿ ಭಯ ಹುಟ್ಟಿಸಿ ನಂಬಿಕೆ ಬರುವಂತೆ ಮಾಡುತ್ತಾರೆ. ನಂತರ ಹಿರಿಯ ಅಧಿಕಾರಿಗಳಿಗೆ ಕರೆ ಕನೆಕ್ಟ್ ಮಾಡುವುದಾಗಿ ಹೇಳಿ ಫೋನ್ ಕರೆ ‘ಕಟ್’ ಮಾಡದಂತೆ ಡಿಜಿಟಲ್ ಆರೆಸ್ಟ್ ಮಾಡುತ್ತಾರೆ. ಇದರಿಂದ ವಂಚನೆಗೊಳಗಾಗುವಾಗ ಮತ್ತು ಹಣ ವರ್ಗಾವಣೆ ಮಾಡುವಾಗ ಯಾರೊಂದಿಗೂ ಸಂಪರ್ಕ ಮಾಡದಂತೆ ಈ ಮೂಲಕ ದಿಗ್ಭಂಧನ ಹಾಕಿರುತ್ತಾರೆ. ಏಕೆಂದರೆ ಬೇರೆಯವರನ್ನು ಸಂಪರ್ಕಿಸಿದರೆ ಇವರ ವಂಚನೆ ಬಯಲಾಗುವ ಸಂಭವವಿರುತ್ತದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಯಾವುದೇ ಪೊಲೀಸ್ ಠಾಣೆಯಿಂದ ಅಧಿಕಾರಿ ವೀಡಿಯೋ ಕರೆ ಮಾಡುವುದಿಲ್ಲ, ಅಷ್ಟೇ ಅಲ್ಲ ಹಣ ವರ್ಗಾಯಿಸುವಂತೆ ಹೇಳುವುದಿಲ್ಲ ಮತ್ತು ಲ್ಯಾಂಡ್ಲೈನ್ ಬಳಸುತ್ತಾರೆ. ಸಾರ್ವಜನಿಕರು ಜಾಗರೂಕರಾಗಿದ್ದರೆ ಇಂತಹ ದುಷ್ಕರ್ಮಿಗಳ ತಂತ್ರಗಳು ಮೊದಲೇ ಬಯಲಾಗುತ್ತವೆ, ಜನರು ಎಚ್ಚರದಿಂದ ಇರಬೇಕು ಎಂದು ಸಲೀಂ ಹೇಳಿದರು.