ಸುಂಟಿಕೊಪ್ಪ, ಆ. ೧೬: ದೇಶದ ಸ್ವಾತಂತ್ರö್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದವರನ್ನು ರಚನಾತ್ಮಕ ಮತ್ತು ಸಮಾಜವನ್ನು ಕಟ್ಟುವ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಎಸ್‌ವೈಎಸ್ ಕೊಡಗು ಜಿಲ್ಲಾ ಘಟಕದಿಂದ ಗದ್ದೆಹಳ್ಳದ ಎಸ್‌ಎಸ್ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ೭೮ನೇ ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ರಾಷ್ಟç ರಕ್ಷಾ ಸಂಗಮ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ದೇಶದ ಸಂವಿಧಾನದಡಿಯಲ್ಲಿ ನಾವೆಲ್ಲರೂ ಒಂದೇ ಪ್ರತಿಯೊಬ್ಬನ ಸಮಸ್ಯೆಯು ನನ್ನ ಸಮಸ್ಯೆ ಎಂದು ತಿಳಿದು ನಾವು ಪರಸ್ಪರ ಪ್ರೀತಿ ಸೌರ್ಹದತೆಯಿಂದ ಬಾಳಬೇಕು. ಸಮಸ್ಯೆಗಳು ರಾಜಕಾರಣಿಗಳ ಜವಬ್ದಾರಿಯಲ್ಲ. ಸಮಾಜದ ಪ್ರತಿಯೊಬ್ಬರೂ ಸಮಸ್ಯೆಗಳ ಪರಿಹಾರಕ್ಕೆ ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

ಸಮಾಜದಲ್ಲಿ ಉಳ್ಳವರು ಇಲ್ಲದಿರುವವರ ಬಗ್ಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಬೇಕು. ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ನಾಗರಿಕರಾಗಿ ಸಮೃದ್ಧ ದೇಶವನ್ನು ಕಟ್ಟಬೇಕೆಂದು ಕರೆ ನೀಡಿದರು.

ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ನಾವು ಯಾವುದೇ ಜಾತಿ, ಧರ್ಮ, ಜನಾಂಗಕ್ಕೆ ಸೇರಿದ್ದಲ್ಲಿ ನಾವು ಮೊದಲು ಭಾರತೀಯರು ಎಂಬ ಅಭಿಮಾನ ಇರಬೇಕು. ಎಲ್ಲಾ ಧರ್ಮಗಳು ನೋಯಿಸದೆ ದ್ವೇಷಿಸದೇ ಪರಸ್ಪರ ಪ್ರೀತಿ ಸಹನೆಯಿಂದ ಬದುಕನ್ನು ಸಾಗಿಸುವುದು ಎಂದು ಪ್ರತಿಪಾದಿಸುತ್ತೇವೆ. ನಾವೆಲ್ಲರೂ ಮಾನವೀಯ ಧರ್ಮವನ್ನು ಪಾಲಿಸಬೇಕು. ಅಂತರAಗ ಬಹಿರಂಗ ಶುದ್ಧವಾಗಿದ್ದಾಗ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದರೆ ಆಧುನಿಕ ಜೀವನ ಶೈಲಿಯ ಹಿನ್ನೆಲೆಯಲ್ಲಿ ನೆಮ್ಮದಿಯ ಜೀವನ ಮರೀಚಿಕೆಯಾಗಿದೆ ಎಂದು ಅವರು ವಿಷಾದಿಸಿದರು.

ಸುಂಟಿಕೊಪ್ಪ ಇಮಾನ್ಯುವೆಲ್ ದೇವಾಲಯದ ಧರ್ಮಗುರು ಮಧುಕಿರಣ್ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಭಾರತ ದೇಶ ಕಾಣುತ್ತದೆ. ಪ್ರತಿಯೊಬ್ಬರೂ ಮಾನವೀಯ ಧರ್ಮವನ್ನು ಅಳವಡಿಸಿಕೊಳ್ಳಬೇಕು. ಜಾತ್ಯೀತ ಮತ್ತು ಸಮಾನತೆಯ ಸಮಾಜವನ್ನು ಕಟ್ಟಲು ಸಂವಿಧಾನ ಅವಕಾಶಕೊಟ್ಟಿದ್ದು, ನಾವೆಲ್ಲಾರೂ ಒಂದಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಎಸ್‌ಕೆಎಸ್‌ಎಸ್‌ಎಫ್ ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಅನಿಸ್ ಕೌಸರಿ ಮಾತನಾಡಿ, ದೇಶದಲ್ಲಿ ಕೆಲವರಿಂದ ಆಶಾಂತಿ ಮತ್ತು ಅಸಹನೆಯನ್ನು ಕದಡುವ ಕಾರ್ಯಗಳಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆಯು ಮೌಖಿಕ ವಿಚಾರಗಳಿಗೆ ಮಾರುಹೋಗುತ್ತಿದೆ. ದೇಶದ ಸಾತ್ವಿಕ ವಿಚಾರಗಳನ್ನು ಗಮನಹರಿಸುವಲ್ಲಿ ಯುವಪೀಳಿಗೆ ಮುಂದಾಗಬೇಕೆAದರು. ದೇಶವು ಸುಭಿಕ್ಷೆಯಾಗಿರಬೇಕೆಂದರೆ ನಾವೆಲ್ಲಾರೂ ಭಾರತೀಯರು ಎನ್ನುವ ಭಾವನೆಯನ್ನು ಆರಿತು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ದೇಶವು ಮುಂದುವರಿದ ರಾಷ್ಟçವಾಗಲು ಸಾಧ್ಯವೆಂದು ಪ್ರತಿಪಾದಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷÀ ಸಿ.ಪಿ.ಎಂ. ಬಶೀರ್ ಹಾಜಿ ವಹಿಸಿದ್ದರು.

ವೇದಿಕೆಯಲ್ಲಿ ವಿಟ್ಲದ ಮಾಜಿ ಶಾಸಕ ಕೆ.ಎ. ಇಬ್ರಾಹಿಂ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶೈಖುನಾ ಎಂ.ಎA. ಅಬ್ದುಲ್ಲಾ ಫೈಝಿ ಮಾತನಾಡಿದರು. ಇದೇ ಸಂದರ್ಭ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿಯನ್ನು ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿ ಆಶ್ರಫ್ ಫೈಝಿ ಬೋಧಿಸಿದರು.

ಕೊಡಗು ಜಿಲ್ಲಾ ಎಸ್‌ವೈಎಸ್ ಸಂಘಟನಾ ಕಾರ್ಯದರ್ಶಿ ಹಮಿದ್ ಮುಸ್ಲಿಯಾರ್ ಸ್ವಾಗತಿಸಿ, ಕೊಡಗು ಜಿಲ್ಲೆಯ ಜವiಯಾತುಲ್ ಉಲಾಮ, ಪ್ರಧಾನ ಕಾರ್ಯದರ್ಶಿ ಬಹು ಎ.ಸಿ.ಉಸ್ಮಾನ್ ಫಝಿ ಪ್ರಾರ್ಥಿಸಿ, ವೀರಾಜಪೇಟೆ ಶರೀಫ್ ವಂದಿಸಿದರು.