ಮಡಿಕೇರಿ, ಆ. ೧೬ : ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಚಾಲಕ ತೆನ್ನಿರ ಮೈನಾ ವಿರುದ್ಧ ಮಡಿಕೇರಿ ನಗರ ಬಿಜೆಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ನಗರಸಭಾ ಸದಸ್ಯ, ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ನೇತೃತ್ವದಲ್ಲಿ ಮಡಿಕೇರಿ ನಗರ ವೃತ್ತನಿರೀಕ್ಷಕರಿಗೆ ದೂರು ಸಲ್ಲಿಸಿದ ಬಿಜೆಪಿ ಪ್ರಮುಖರು, ತೆನ್ನಿರ ಮೈನಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ತಾ. ೧೪ರಂದು ಬಿಜೆಪಿ ವತಿಯಿಂದ ಸ್ವಾತಂತ್ರೊö್ಯÃತ್ಸವ ಅಂಗವಾಗಿ ಭಾರತದ ಮಹಾ ದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಸ್ವಾತಂತ್ರ ್ಯಕ್ಕಾಗಿ ಹೋರಾಟ ಮಾಡಿದ ಗುಡ್ಡೆಮನೆ ಅಪ್ಪಯ್ಯಗೌಡರ ಪುತ್ಥಳಿಯನ್ನು ಸ್ವಚ್ಛಗೊಳಿಸಲಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ಆದರೆ ಈ ಕಾರ್ಯಕ್ರಮ ಸಹಿಸದ ತೆನ್ನಿರ ಮೈನಾ ಸಾಮಾಜಿಕ ಜಾಲತಾಣಗಳಲ್ಲಿ ‘ಬಿ.ಜೆ.ಪಿ.ಯವರು ನಗರಸಭಾ ಸಿಬ್ಬಂದಿಗಳಾಗಿದ್ದಾರೆಯೇ ? ಓಹೋ ಕ್ಷಮಿಸಿ ನಿರುದ್ಯೋಗಿಗಳಾಗಿದ್ದಾರೆ.’ ಮುಂತಾದ ಶಬ್ದಗಳಿಂದ ಬಿ.ಜೆ.ಪಿ. ಹಾಗೂ ಸ್ವಾತಂತ್ರ‍್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಮಾಡಿದ ನಾಯಕರುಗಳನ್ನು ಅಣಕಿಸಿ ಜಾಲತಾಣಗಳಲ್ಲಿ ಹೇಳಿಕೆ ಹಂಚಿಕೊAಡಿರುವುದನ್ನು ಖಂಡಿಸಿ ದೂರು ನೀಡಿದ್ದಾರೆ.

ದೂರು ನೀಡುವ ಸಂದರ್ಭ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನಗರ ಪ್ರಧಾನ ಕಾರ್ಯದರ್ಶಿಗಳಾದ ಕವನ್ ಕಾವೇರಪ್ಪ, ಬಿ.ಕೆ. ಜಗದೀಶ್ ಹಾಗೂ ಇನ್ನಿತರರು ಹಾಜರಿದ್ದರು.