ಕಾಯಪಂಡ ಶಶಿ ಸೋಮಯ್ಯ

ಮಡಿಕೇರಿ, ಆ. ೧೫: ಕೊಡಗು ಎಂಬ ವಿಶಿಷ್ಟತೆಯ ಪ್ರದೇಶ ಕೃಷಿ ಪ್ರಧಾನವಾಗಿ ಪುರಾತನ ಕಾಲದಿಂದಲೂ ಮುಂದುವರಿದುಕೊAಡು ಬಂದಿರುವ ಜಿಲ್ಲೆ. ಈ ಹಿಂದೆ ಜಿಲ್ಲೆಯಲ್ಲಿ ಭತ್ತದ ಕೃಷಿಯೇ ಪ್ರಮುಖವಾಗಿತ್ತು. ಎಂಬುದು ಈಗ ಇತಿಹಾಸವೆನಿಸಿದೆ. ಇಲ್ಲಿನ ಹಬ್ಬಗಳೂ ಈ ಕೃಷಿಗೇ ಪೂರಕವಾದದ್ದು. ಮುಂಗಾರು ಆರಂಭದಿAದ ಗದ್ದೆ ಕೆಲಸಕ್ಕೆ ಮುಂದಾದರೆ ‘ಕೈಲ್‌ಪೊಳ್ದ್’ ತನಕ ಇದು ನಡೆಯುತ್ತಿತ್ತು. ಕೃಷಿ ಕೆಲಸದ ಒತ್ತಡ ಕಡಿಮೆಯಾದ ಬಳಿಕ ಈ ಹಬ್ಬದ ಸಂಭ್ರಮದೊAದಿಗೆ ಆತನಕದ ಪಡಿಪಾಟಲನ್ನು ಮರೆಯಲಾಗುತ್ತಿತ್ತು. ಇದಾದ ನಂತರದಲ್ಲಿ ಈ ಕೃಷಿಯ ಪೋಷಣೆ. ಈ ವೇಳೆಗೆ ಕಾವೇರಿ ಸಂಕ್ರಮಣದ ಆಚರಣೆ. ಪವಿತ್ರ ತೀರ್ಥೋದ್ಭವ, ಇದರ ಸಂದರ್ಭದಲ್ಲಿಯೂ ಕೃಷಿ ಮಾಡಿದ ಗದ್ದೆಗಳಿಗೆ ಬೊತ್ತು ಕುತ್ತುವ (ಬೆತ್ತು) ಮೂಲಕ ಧಾನ್ಯಲಕ್ಷಿö್ಮಗೆ ಸ್ವಾಗತ, ತೀರ್ಥೋದ್ಭವದ ಮರುದಿನ ಮುಂಜಾನೆ ಗದ್ದೆಯಲ್ಲಿ ದೀಪ ಹಚ್ಚಿ ದೋಸೆ ಹಿಟ್ಟು ಇಡುವ ಆಚರಣೆ, ನಂತರದಲ್ಲಿ ಬರುವ ಧಾನ್ಯ ಲಕ್ಷಿö್ಮಯನ್ನು ಮನೆ ತುಂಬಿಸಿಕೊಳ್ಳುವ ಹಿನ್ನೆಲೆಯ ಪುತ್ತರಿ (ಹುತ್ತರಿ ಹಬ್ಬ) ಇವೆಲ್ಲವೂ ಭತ್ತದ ಕೃಷಿಗೇ ಪೂರಕವಾದ ಕೊಡಗಿನ ಪ್ರಮುಖ ಹಬ್ಬಗಳಾಗಿವೆ. ಪ್ರಕೃತಿಯ ಆರಾಧಕರಾದ ಕೊಡಗಿನವರಿಗೆ ಇವೆಲ್ಲವಕ್ಕೂ ಒಂದಕ್ಕೊAದು ಅವಿನಾಭಾವ ಸಂಬAಧವಿದೆ.

ಗದ್ದೆ ಕೆಲಸದ ಪರಿಣಾಮದಿಂದ ನೀರಿನ ಸಮತೋಲನ, ಅಂತರ್‌ಜಲದ ಮಟ್ಟ ಈ ರೀತಿಯಾದ ವ್ಯವಸ್ಥೆಗಳೂ ಉತ್ತಮವಾಗಿರುತ್ತಿತ್ತು. ಪ್ರಸ್ತುತ ಇವೆಲ್ಲವೂ ಸಾಂಕೇತಿಕವಾಗುತ್ತಿರುವುದು ವಿಷಾದಕರ. ಇತ್ತೀಚಿನ ಕೆಲವಾರು ವರ್ಷಗಳಿಂದ ಭತ್ತದ ಗದ್ದೆಗಳ ಕೃಷಿಯ ವೈಭವ ಕೊಡಗಿನಲ್ಲಿ ವರ್ಷಂಪ್ರತಿ ಕಡಿಮೆಯಾಗುತ್ತಲೇ ಬರುತ್ತಿವೆ. ಗದ್ದೆಗಳ ಪ್ರಮಾಣವೂ ಕ್ಷೀಣಿಸಿಕೊಂಡು ಬರುತ್ತಿದೆ. ನಿವೇಶನಗಳು-ತೋಟಗಳಾಗಿ ಪರಿವರ್ತನೆ, ವನ್ಯಪ್ರಾಣಿಗಳ ಕಾಟ ಮತ್ತಿತರ ಕಾರಣದಿಂದಾಗಿ ಈ ಹಿಂದೆ ನಳನಳಿಸುತ್ತಿದ್ದ ಗದ್ದೆಗಳು ಪಾಳುಬೀಳುತ್ತಿವೆ. ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಬೃಹತ್ ಕಾಡಾಗಿಯೂ ರೂಪುಗೊಳ್ಳುತ್ತಿರುವುದು ಈಗಿನ ವಾಸ್ತವವಾಗಿದೆ.

ಆದರೆ ಇದೀಗ ಕೆಲವಾರು ಚಿಂತನೆಗಳು, ಅವಿಷ್ಕಾರಗಳು ಹಂತಹAತವಾಗಿ ಮತ್ತೆ ಭತ್ತದ ಕೃಷಿಗೆ ಪೂರಕವಾಗುವ ಲಕ್ಷಣಗಳು ಕಂಡುಬರುತ್ತಿವೆ. ಹಲವು ಸಂಘ-ಸAಸ್ಥೆಗಳ ಪ್ರಯತ್ನ, ವೈಯಕ್ತಿಕವಾಗಿಯೂ ಕೆಲವರ ಆಸಕ್ತಿಯ ಫಲವಾಗಿ ಅಲ್ಲಲ್ಲಿ ಭತ್ತದ ಕೃಷಿ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಕೆಸರುಗದ್ದೆ ಕ್ರೀಡಾಕೂಟಗಳೂ ಇದಕ್ಕೆ ಒಂದಷ್ಟು ಪೂರಕವಾಗುತ್ತಿವೆ ಎಂಬುದೂ ಉಲ್ಲೇಖನೀಯ.

ಕನೆಕ್ಟಿಂಗ್ ಕೊಡವಾಸ್‌ನ ಕ್ರಿಯಾಶೀಲ ಯತ್ನ

ಕಳೆದ ಕೆಲವು ತಿಂಗಳ ಹಿಂದೆ ವಿಶ್ವದ ನಾನಾ ಭಾಗದಲ್ಲಿ ಚದುರಿದಂತಿರುವ ಇಲ್ಲಿನ ಮೂಲ ನಿವಾಸಿಗಳೂ ಆದ ಕೊಡವರನ್ನು ಮತ್ತೆ ಬೆಸೆಯುವಂತೆ ಮಾಡುವ ಚಿಂತನೆಯೊAದಿಗೆ ಗ್ಲೋಬಲ್ ಕೊಡವ ಸಮ್ಮಿಟ್ (ವಿಶ್ವ ಕೊಡವ ಮೇಳ) ಸಂಘಟಿಸಿದ್ದ ಈ ಮೂಲಕ ಒಂದಷ್ಟು ಯಶಸ್ಸನ್ನೂ ಕಂಡಿರುವ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ಸಂಘಟನೆ ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇದರಂತೆ ಬೊಳ್ಳರಿಮಾಡು ಗ್ರಾಮದಲ್ಲಿ ಈ ಬಾರಿ ೧೫ ವರ್ಷಗಳಿಂದಲೂ ಪಾಳು ಬಿದ್ದು ಕಾಡಾಗಿ ಪರಿವರ್ತನೆಗೊಳ್ಳುತ್ತಿದ್ದ ೩೮ ಎಕರೆಯಷ್ಟು ಗದ್ದೆಯನ್ನು ಭತ್ತದ ಕೃಷಿಗಾಗಿ ಸಿದ್ಧತೆ ಮಾಡಲಾಗುತ್ತಿದೆ. ಪುಟ್ಟಿಚಂಡ ಹಾಗೂ ಸ್ಥಳೀಯ ಪಟ್ರಪಂಡ ಕುಟುಂಬಕ್ಕೆ ಸೇರಿದ ಗದ್ದೆ ಇದಾಗಿದ್ದು, ಈ ಕುಟುಂಬಸ್ಥರ ಸಹಕಾರದೊಂದಿಗೆ ಇದೀಗ ಗದ್ದೆಯ ಜಾಗ ಈ ಹಿಂದಿನ ವೈಭವಕ್ಕೆ ಮರಳುತ್ತಿದೆ. ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ಲಕ್ಷಾಂತರ ವೆಚ್ಚದಲ್ಲಿ ಈ ಗದ್ದೆಗಳನ್ನು ಹಸನುಗೊಳಿಸಲಾಗಿದೆ. ಬಹುತೇಕ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ತಾ.೧೭ರ ಶನಿವಾರದಂದು ನಾಳೆ ‘ನಾಟಿ ಪಣಿ’ ಎಂಬ ಹೆಸರಿನೊಂದಿಗೆ ಮಣ್ಣ್ ಮರ್‌ಕತಿ, ಭೂಮಿ ಪಡ್‌ಬುಡತಿ ಎಂಬ ಧ್ಯೇಯದೊಂದಿಗೆ ನಾಟಿ ಕೆಲಸಕ್ಕೆ ವ್ಯವಸ್ಥೆ ಮಾಡಲಾಗಿದೆ. ಕನೆಕ್ಟಿಂಗ್ ಕೊಡವಾಸ್‌ನ ಈ ಪ್ರಯತ್ನಕ್ಕೆ ಇತರ ಹಲವು ಕೊಡವ ಸಂಘಟನೆ ಗಳವರೂ, ಕುಟುಂಬಸ್ತರು ಸಹಕಾರ ನೀಡುತ್ತಿದ್ದಾರೆ. ತಾ.೧೭ರಂದು ಶನಿವಾರ ಸುಮಾರು ಐದು ಎಕರೆಯಲ್ಲಿ ಸಾಮೂಹಿಕ ಸಹಭಾಗಿತ್ವದಲ್ಲಿ ನಾಟಿ ಕಾರ್ಯ ನಡೆಯಲಿದ್ದು ಬಳಿಕ ಉಳಿದ ಜಾಗದಲ್ಲಿ ನಾಟಿ ಪೂರೈಸಲಾಗುವದು ಕೇವಲ ಗದ್ದೆಗಳನ್ನು ಪುನರುತ್ಥಾನಗೊಳಿಸುವ ಉದ್ದೇಶವಿರುವುದರಿಂದ ಕೆಸರುಗದ್ದೆ ಕ್ರೀಡೆಗಳನ್ನು ಇಲ್ಲಿ ಆಯೋಜಿಸಲಾಗುತ್ತಿಲ್ಲ. ಬದಲಿಗೆ ಈ ಹಿಂದೆ ರೂಢಿಯಲ್ಲಿದ್ದ ಕೂಡು ನಾಟಿ (ಕೂಟ್ ನಾಟಿ) ಪರಿಕಲ್ಪನೆಯೊಂದಿಗೆ ನಾಟಿ ನೆಡುವ ಕೆಲಸವನ್ನು ಅಂದು ನಿರ್ವಹಿಸಲಾಗುತ್ತಿದೆ.

ಒಂದೆರಡು ಶಾಲೆಗಳ ನೂರಾರು ವಿದ್ಯಾರ್ಥಿಗಳು ಇದರಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಕೃಷಿಯ ಮಹತ್ವದ ಅರಿವನ್ನು ಮೂಡಿಸಲಾಗುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳು ಕೃಷಿಯ ಅಗತ್ಯತೆ. ಸಾಧಕ-ಭಾದಕದ ಬಗ್ಗೆ ವಿಚಾರ ವಿನಿಮಯ ಮಾಡುವುದು, ಜನಪ್ರತಿನಿಧಿಗಳು, ಕೃಷಿ ಇಲಾಖೆಗೆ ಸಂಬAಧಿಸಿದ ಅಧಿಕಾರಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಈ ನಾಟಿ ಪಣಿ ಒಂದು ಹಬ್ಬದಂತೆ ಆ ದಿನ ಜರುಗಲಿದೆ ಎಂದು ಸಂಘಟಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ..

ಮುಂದಿನ ವರ್ಷಗಳಲ್ಲಿ ಭೂಮಿ ಕೆಲಸವೇ ಕುಟುಂಬಗಳ ಒಗ್ಗಟ್ಟು, ಅಭಿವೃದ್ಧಿಗೆ ಮೂಲಾಧಾರ ಎಂಬ ಚಿಂತನೆಯೊAದಿಗೆ ಪಾಳು ಬಿಡಲ್ಪಟ್ಟಿರುವ ಇತರ ಕುಟುಂಬಗಳ ಗದ್ದೆ ಜಾಗವನ್ನು ಅವರ ಸಹಕಾರದೊಂದಿಗೆ ಪುನರ್‌ಜೀವಗೊಳಿಸುವುದು, ಈ ಹಿಂದಿನ ಸಹಕಾರ ಪದ್ಧತಿಯಂತೆ ಕುಟುಂಬ ಸಹಕಾರ ಸಂಘವನ್ನು ಸ್ಥಾಪಿಸಿ ಆ ಮೂಲಕ ಇದನ್ನು ಮುಂದುವರಿಸಿಕೊAಡು ಹೋಗುವಂತೆ ಮಾಡುವುದು, ಜಿಲ್ಲೆಯ ಪರಿಸರ ಸಮತೋಲನೆ ಕಾಪಾಡಲು ಪೂರಕ ಪ್ರಯತ್ನ ನಡೆಸುವ ಉದ್ದೇಶ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ನವರದ್ದಾಗಿದೆ. ಇದು ನಿಜಕ್ಕೂ ಜಿಲ್ಲೆಯ ಹಿತದೃಷ್ಟಿಯಿಂದ ಕ್ರಿಯಾಶೀಲ ಪ್ರಯತ್ನವಾಗಿದ್ದು, ಶುಭ ಹಾರೈಕೆ.