ಮಡಿಕೇರಿ, ಆ. ೧೬: ೨೦೨೧-೨೨ನೇ ಸಾಲಿನಲ್ಲಿ ಜೇನುಕುರುಬ ಸಮುದಾಯ ದವರ ಜನಾಂಗದ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೃಷಿ ಉದ್ದೇಶಕ್ಕಾಗಿ ಡೀಸೆಲ್ ಮೋಟಾರ್ ಮತ್ತು ಪೈಪ್‌ಗಳ ಖರೀದಿಗೆ, ಕಾಫಿ, ಭತ್ತ ಬೆಳೆಯುತ್ತಿರುವ ಜಮೀನಿಗೆ ತಂತಿಬೇಲಿ ಅಳವಡಿಕೆಗೆ ಸಹಾಯಧನ, ಸರಕು ಸಾಗಾಣಿಕೆ ವಾಹನ ಖರೀದಿಗೆ, ಹಂದಿ ಸಾಕಾಣಿಕೆಗೆ, ಹಸು ಸಾಕಾಣಿಕೆ ಹಾಗೂ ಆಡು/ ಕುರಿ ಸಾಕಾಣಿಕೆಗೆ ಸಹಾಯಧನ ನೀಡುವ ಸಂಬAಧ ಪರಿಶಿಷ್ಟ ಪಂಗಡದ ಜೇನುಕುರುಬ ಜನಾಂಗದವರಿAದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಹೊಸ ಜಿಲ್ಲಾ ಪಂಚಾಯತ್ ಕಟ್ಟಡ, ೧ನೇ ಮಹಡಿ, ಕೊಡಗು ಜಿಲ್ಲೆ, ಮಡಿಕೇರಿ(೦೮೨೭೨-೨೦೦೫೦೦), ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ವೀರಾಜಪೇಟೆ (೯೯೦೧೪೮೨೭೬೩) ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ (೭೨೫೯೫೫೨೬೫೫) ಮತ್ತು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ (೯೧೧೩೮೬೦೭೦೯) ಇಲ್ಲಿ ಪಡೆದು ತಾ. ೨೩ ರೊಳಗೆ ಸಲ್ಲಿಸಬೇಕು.