ಚೆಯ್ಯಂಡಾಣೆ, ಆ. ೧೫: ವಯನಾಡಿನ ಭೂ ಕುಸಿತ ಪ್ರದೇಶದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲೆಯ ೩೦ ಕಾರ್ಯಕರ್ತರು ಸೇವಾ ನಿರತ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪುಜೆರಿಮಟ್ಟಂ, ಅತ್ತಮಲ, ಮುಂಡಕೈ ಹಾಗೂ ಚೂರಂಮ್ಮಲ ಭಾಗಗಳಲ್ಲಿ ಸಂಭವಿಸಿದ ಭೀಕರ ಭೂ ಕುಸಿತ ಹಾಗೂ ಪ್ರವಾಹ ದುರಂತದಲ್ಲಿ ನೂರಾರು ಜನರ ಮೃತ ದೇಹ ಇನ್ನೂ ಮಣ್ಣಿನಡಿಯಲ್ಲಿ ಸಿಲುಕಿದೆ. ಅದರಂತೆ ಸಾಮೂಹಿಕ ಸಂಶೋಧನಾ ಕಾರ್ಯಚರಣೆಗೆ ಎಸ್.ವೈ.ಎಸ್ ವಯನಾಡ್ ಸಾಂತ್ವನ ವಿಭಾಗದೊಂದಿಗೆ ಕೈ ಜೋಡಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಎಸ್.ಎಸ್.ಎಫ್. ಕೊಡಗು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಅವರ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಮನೆಗಳನ್ನು ಶುಚಿಗೊಳಿಸುವ, ವಸ್ತುಗಳನ್ನು ವರ್ಗಾವಣೆ ಮಾಡುವ ಕಾರ್ಯದಲ್ಲಿ ನಿರತರಾಗಿ ಶ್ರಮವಹಿಸಿದರು.
ಭೂ ಕುಸಿತ ಹಾಗೂ ಪ್ರವಾಹದ ಸಂದರ್ಭದಲ್ಲಿ ದಿಕ್ಕುಪಾಲಾದ ಅಲ್ಲಿನ ನಿರಾಶ್ರಿತರಿಗೆ ಅಗತ್ಯ ಸಾಮಗ್ರಿಗಳನ್ನು ಎಸ್.ಎಸ್.ಎಫ್, ಎಸ್.ವೈ.ಎಸ್, ಕೆಎಂ ಜೆ,ಎಸ್ ಜೆಎಂ, ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ಗಳ ಸಾರಥ್ಯ ಸಹಕಾರದಲ್ಲಿ ನೀಡಲಾಗಿದೆ. ಕಾರ್ಯಾಚರಣೆ ಸಂದರ್ಭ ಹಲವಾರು ಬೆಲೆ ಬಾಳುವ ವಸ್ತುಗಳು ದೊರೆತಿದ್ದು ಅದನ್ನು ಇಲಾಖೆಗೆ ಒಪ್ಪಿಸಿದ್ದೇವೆ ಎಂದು ಎಸ್.ಎಸ್.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಮಾಹಿತಿ ಇತ್ತಿದ್ದಾರೆ. ಎಸ್.ವೈ.ಎಸ್ ಕೋಝಿಕ್ಕೋಡ್ ಸಾಂತ್ವನ ವಿಭಾಗದ ನಾಯಕರಾದ ಶೌಕತ್ ಅಲಿಯವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಹಾಗೂ ಮೃತದೇಹಗಳ ಸಂಶೋಧನಾ ಕಾರ್ಯಚರಣೆಗೆ ಜಿಲ್ಲೆಯ ಕಾರ್ಯಕರ್ತರು ಕೈ ಜೋಡಿಸಿದರು.
ಈ ಸಂದರ್ಭ ಎಸ್.ಎಸ್.ಎಫ್ ಕೊಡಗು ಜಿಲ್ಲಾ ವಿಸ್ಡಮ್ ಕಾರ್ಯದರ್ಶಿ ಗಫೂರ್ ಮಾಪಿಳತ್ತೋಡು, ಕಮರುದ್ದೀನ್ ಅನ್ವಾರಿ ಅಹ್ಸನಿ ಎಡತ್ತರ, ರಶಾದ್ ಹೊಲಮಾಳ, ರಶೀದ್ ಮಾಪಿಳತ್ತೋಡು ಸೇರಿದಂತೆ ೩೦ ಸ್ವಯಂ ಸೇವಕರು ಪಾಲ್ಗೊಂಡಿದರು.ಬಾಳುವ ವಸ್ತುಗಳು ದೊರೆತಿದ್ದು ಅದನ್ನು ಇಲಾಖೆಗೆ ಒಪ್ಪಿಸಿದ್ದೇವೆ ಎಂದು ಎಸ್.ಎಸ್.ಎಫ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಮಾಹಿತಿ ಇತ್ತಿದ್ದಾರೆ. ಎಸ್.ವೈ.ಎಸ್ ಕೋಝಿಕ್ಕೋಡ್ ಸಾಂತ್ವನ ವಿಭಾಗದ ನಾಯಕರಾದ ಶೌಕತ್ ಅಲಿಯವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಹಾಗೂ ಮೃತದೇಹಗಳ ಸಂಶೋಧನಾ ಕಾರ್ಯಚರಣೆಗೆ ಜಿಲ್ಲೆಯ ಕಾರ್ಯಕರ್ತರು ಕೈ ಜೋಡಿಸಿದರು.
ಈ ಸಂದರ್ಭ ಎಸ್.ಎಸ್.ಎಫ್ ಕೊಡಗು ಜಿಲ್ಲಾ ವಿಸ್ಡಮ್ ಕಾರ್ಯದರ್ಶಿ ಗಫೂರ್ ಮಾಪಿಳತ್ತೋಡು, ಕಮರುದ್ದೀನ್ ಅನ್ವಾರಿ ಅಹ್ಸನಿ ಎಡತ್ತರ, ರಶಾದ್ ಹೊಲಮಾಳ, ರಶೀದ್ ಮಾಪಿಳತ್ತೋಡು ಸೇರಿದಂತೆ ೩೦ ಸ್ವಯಂ ಸೇವಕರು ಪಾಲ್ಗೊಂಡಿದರು.