ಮಡಿಕೇರಿ, ಆ. ೧೬: ಕೋಲ್ಕೋತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ದಾರುಣ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿ ಯೇಷನ್ ಕೊಡಗು ಜಿಲ್ಲಾ ಘಟಕದ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸಿ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಜೊತೆಗೆ ಮೊಂಬತ್ತಿ ಹಿಡಿದು ವೈದ್ಯೆಗೆ ಸಂತಾಪ ವ್ಯಕ್ತಪಡಿಸಿದರು. ಭಾರತದಾದ್ಯಂತ ಇರುವ ೩ ಲಕ್ಷಕ್ಕೂ ಅಧಿಕ ಸಂಘಕ್ಕೆ ಸೇರಿದ ಆಯುಷ್ ವೈದ್ಯರು ಕಪ್ಪು ಪಟ್ಟಿ ಧರಿಸುವುದರೊಂದಿಗೆ ಘಟನೆಯನ್ನು ಖಂಡಿಸಿ ಆದಷ್ಟು ಶೀಘ್ರವಾಗಿ ಸಂತ್ರಸ್ತೆಯ ಮನೆಯವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಿ.ಬಿ.ಐ. ಕಾರ್ಯ ನಿರ್ವಹಿಸುವಂತೆ ಒತ್ತಾಯಿಸಿರುವುದಾಗಿ ಡಾ. ರಾಜಾರಾಮ್ ತಿಳಿಸಿದ್ದಾರೆ