ಮಡಿಕೇರಿ, ಆ. ೧೪: "ಬಾಲಗೋಕುಲ ಮಡಿಕೇರಿ" ಇವರ ವತಿಯಿಂದ ತಾ. ೨೫ ರಂದು ೧೪ ವರ್ಷದೊಳಗಿನ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀಕೃಷ್ಣ, ರುಕ್ಮಣಿ, ರಾಧೆ, ದೇವಕಿ, ಯಶೋಧೆ ಹಾಗೂ ವಸುದೇವರ ಛದ್ಮವೇಷ ಸಮಾಗಮವನ್ನು ಆಯೋಜಿಸಲಾಗುತ್ತಿದೆ. ಈ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಛದ್ಮವೇಷಧಾರಿಗಳಿಗೆ ಪ್ರಶಂಸನಾ ಪತ್ರವನ್ನು ನೀಡಲಾಗುವುದು, ಭಾಗವಹಿಸಲು ಇಚ್ಚಿಸುವವರು ತಾ. ೨೦ ರೊಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಮೊಬೈಲ್ ಸಂಖ್ಯೆ: ೯೪೮೦೧೭೦
೩೦೮, ೯೪೪೮೫೪೧೩೨೮