ಕಣಿವೆ, ಆ. ೧೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕುಶಾಲನಗರ ತಾಲೂಕು ಕೂಡುಮಂಗಳೂರು ಸಮುದಾಯ ಭವನದಲ್ಲಿ ಪೌಷ್ಟಿಕ ಆಹಾರ ಸಿರಿಧಾನ್ಯ ಬಳಕೆ ಮಾಹಿತಿ ಕಾರ್ಯಕ್ರಮವನ್ನು ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಸೊಪ್ಪು, ತರಕಾರಿ, ಕಾಳುಗಳು ಮೊದಲಾದ ಪೌಷ್ಠಿಕಾಂಶ ಯುಕ್ತ ಆಹಾರಗಳನ್ನು ಸೇವಿಸುವ ಮೂಲಕ ಅಪೌಷ್ಟಿಕತೆ ದೂರಮಾಡಬೇಕು ಎಂದರು. ಆರೋಗ್ಯ ಇಲಾಖೆಯ ಗೀತಾ ಮಾತನಾಡಿ, ಪೌಷ್ಟಿಕ ಆಹಾರಗಳು ಮತ್ತು ಸಿರಿಧಾನ್ಯ ಗಳಿಂದ ಸಿಗುವಂತಹ ಪೌಷ್ಟಿಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಒಕ್ಕೂಟದ ಅಧ್ಯಕ್ಷ ಗಿರೀಶ್, ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಗೀತಾ ಧರ್ಮಸ್ಥಳ ಯೋಜನೆಯ ಕುಶಾಲ ನಗರ ವಲಯದ ಮೇಲ್ವಿಚಾರಕಿ ಪೂರ್ಣಿಮಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕವನ, ಸೇವಾ ಪ್ರತಿನಿಧಿ ನಿರ್ಮಲ ಹಾಗೂ ಅಭ್ಯುದಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿದ್ದರು.